ನವದೆಹಲಿ:ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದಾಗಿ ದೇಶದಲ್ಲಿ 162 ವೈದ್ಯರು, 107 ನರ್ಸ್ ಹಾಗೂ 44 ಆಶಾ ಕಾರ್ಯಕರ್ತೆಯರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ರಾಜ್ಯ ಸಭೆಯಲ್ಲಿ ಮಾಹಿತಿ ನೀಡಿದೆ.
ಓದಿ: ರೈತರೊಂದಿಗೆ ಯುದ್ಧ ಮಾಡ್ತಿದ್ದೀರಾ?: ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ ಪ್ರಿಯಾಂಕಾ!

ಜನವರಿ 22ರವರೆಗಿನ ಮಾಹಿತಿ ಇದಾಗಿದೆ ಎಂದು ಸಚಿವ ಅಶ್ವಿನ್ ಕುಮಾರ್ ಚೌಬೆ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಕೋವಿಡ್ ಸಂಬಂಧಿಸಿದ ಪ್ರಶ್ನೆವೊಂದಕ್ಕೆ ಉತ್ತರ ನೀಡಿದ ಕೇಂದ್ರದ ಆರೋಗ್ಯ ಖಾತೆ ರಾಜ್ಯ ಸಚಿವರು, ಭಾರತೀಯ ವೈದ್ಯಕೀಯ ಅಸೋಷಿಯೇಷನ್ ಸಿದ್ಧಪಡಿಸಿದ ಅಂಕಿ - ಅಂಶಗಳ ಮಾಹಿತಿ ನೀಡಿದರು.
ಕೋವಿಡ್ನಿಂದ ಮೃತರಾದವರ ಕುಟುಂಬಗಳಿಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿ ವಿಮೆ ವಿತರಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದು, ಕೋವಿಡ್ನಿಂದ ಸಾವನ್ನಪ್ಪಿರುವ ಎಲ್ಲ ಕುಟುಂಬದವರ ಬಗ್ಗೆ ಕೇಂದ್ರ ಸರ್ಕಾರ ಕಾಳಜಿ ವಹಿಸಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಇನ್ನು ದೇಶದಲ್ಲಿ 1,07,66,245 ಕೊರೊನಾ ಸೋಂಕಿತ ಪ್ರಕರಣಗಳಿದ್ದು, ಇದರಲ್ಲಿ 1,63,353 ಸಕ್ರೀಯ ಪ್ರಕರಣಗಳಿವೆ. ಹಾಗೂ 1,54,486 ಜನರು ಸಾವನ್ನಪ್ಪಿದ್ದಾರೆ.