ಹೈದರಾಬಾದ್:ಪ್ರೀತಿ, ಪ್ರೇಮ ಅಂತಾ ಮನಸ್ಸು ಕೆಡಿಸಿಕೊಂಡ 16 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ನಾರಾಯಣಗುಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಕಿಂಗ್ಕೋಟಿಯ ವರ್ದಾಗೇಟ್ ನಿವಾಸಿಯಾದ ಬಾಲಕ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಆದ್ರೆ ಈ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಎಂದು ಸುತ್ತಾಡುತ್ತಿದ್ದ. ಈ ಸಂಗತಿ ಮನೆಯಲ್ಲಿ ತಿಳಿದಿದೆ. ಪೋಷಕರು ಅನೇಕ ಬಾರಿ ಮಗನಿಗೆ ಬುದ್ಧಿಮಾತು ಹೇಳಿದ್ದಾರೆ. ಆದರೂ ಪ್ರೇಮ ವ್ಯವಹಾರ ಮುಂದುವರಿಸಿದ್ದಾನೆ.