ಹೈದರಾಬಾದ್ (ತೆಲಂಗಾಣ):ತೆಲಂಗಾಣ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಇದಕ್ಕೆ ಇಂಬು ನೀಡುವಂತೆ 16 ವರ್ಷದ ದಲಿತ ಬಾಲಕಿ ಮೇಲೆ ಗಾಂಜಾ ಅಮಲಿನಲ್ಲಿದ್ದ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ ವರದಿ ಆಗಿದೆ. ಇಂತಹದೊಂದು ಘಟನೆ ನಡೆದಿದೆ ಬಗ್ಗೆ ಪೊಲೀಸರು ದೃಢಪಡಿಸಿದ್ದು, ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಘಟನೆಯ ಹಿನ್ನೆಲೆ: ಹೈದರಾಬಾದ್ನ ಲಾಲ್ಬಜಾರ್ನ ಬಾಲಕಿಯ (16) ತಂದೆ - ತಾಯಿ ಮೃತಪಟ್ಟಿದ್ದಾರೆ. ಹೀಗಾಗಿ ಈ ಬಾಲಕಿ ತನ್ನ 14 ವರ್ಷದ ತಮ್ಮನೊಂದಿಗೆ ಮೀರ್ಪೇಟ್ನ ಕಾಲೋನಿಗೆ ಬಂದಿದ್ದರು. ಇಲ್ಲಿ ತನ್ನ ಹತ್ತಿರದ ಸಂಬಂಧಿಯಾದ ಅಕ್ಕನ ಬಳಿ ಆಶ್ರಯ ಪಡೆಯುತ್ತಿದ್ದರು. ಮೊದಲೇ ಅನಾಥರಾಗಿದ್ದರಿಂದ ಹೈದರಾಬಾದ್ನ ದಿಲ್ಸುಖ್ನಗರದ ಬಟ್ಟೆ ಅಂಗಡಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದಳು. ಜತೆಗೆ ಆಕೆಯ ತಮ್ಮ ಕೂಡ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಬಾಲಕಿ ತನ್ನ ತಮ್ಮ ಹಾಗೂ ಇತರ ಮೂವರು ಮಕ್ಕಳೊಂದಿಗೆ ಮನೆಯಲ್ಲಿ ಇದ್ದಾಗ 8 ಮಂದಿ ಏಕಾಏಕಿ ಮನೆಗೆ ನುಗ್ಗಿದ್ದಾರೆ. ಅದರಲ್ಲಿ 4 ಮಂದಿ ಗಾಂಜಾ ಸೇವಿಸಿದ್ದು ಬಾಲಕಿಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ ಕಟ್ಟಡದ ಮೂರನೇ ಮಹಡಿಗೆ ಕರೆದುಕೊಂಡು ಹೋಗಿದ್ದಾರೆ.
ಇನ್ನುಳಿದ ಆರೋಪಿಗಳು ಕೆಳಗೆ ಇದ್ದ ಬಾಲಕಿಯ ಸಹೋದರನಿಗೂ ಮತ್ತು ಮಕ್ಕಳಿಗೆ ಬೆದರಿಕೆ ಹಾಕಿ ಕೂರಿಸಿದ್ದಾರೆ. ಮೇಲೆ ಕರೆದೊಯ್ದಿದ್ದ ಬಾಲಕಿಗೆ ಮೂವರು ಆರೋಪಿಗಳು ಚಾಕು ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಬಾಲಕಿ ಜೋರಾಗಿ ಕಿರುಚಿಕೊಂಡು ಓಡಿ ಹೋಗಿದ್ದಾಳೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಘಟನೆ ತಿಳಿದ ಬಾಲಕಿಗೆ ಆಶ್ರಯ ನೀಡಿದ ಸಹೋದರಿಯು ಮೀರ್‌ಪೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಸಖಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಅಪರಾಧ ಎಸಗಿರುವ ಆರೋಪಿಗಳಲ್ಲಿ ಕೆಲವರು ಸಂತ್ರಸ್ತ ಬಾಲಕಿ ವಾಸವಿರುವ ಕಟ್ಟಡದಲ್ಲೇ ಇದ್ದವರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಕಟ್ಟಡದ ಕೆಳ ಮಹಡಿಯಲ್ಲಿ ವಾಸವಾಗಿರುವ ಟೈಸನ್ ಹಾಗೂ ಮಂಗಲ್‌ಹಟ್ಟಿಯ ರೌಡಿ ಶೀಟರ್ ಆಗಿರುವ ಅಬೇದ್ ಲಾಲಾ ಆರೋಪಿಗಳಲ್ಲಿ ಓರ್ವ. ಇನ್ನಿಬ್ಬರು ಆರೋಪಿಗಳು ಅವರ ಮನೆಯ ಬಳಿಯೇ ಇರುತ್ತಾರೆ ಎಂದು ಪೊಲೀಸರಿಗೆ ಸಂತ್ರಸ್ತೆಯ ತಮ್ಮ ತಿಳಿಸಿದ್ದಾನೆ.
ಘಟನೆ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ರಾಚಕೊಂಡ ಪೊಲೀಸ್ ಆಯುಕ್ತ ಡಿಎಸ್ ಚೌಹಾಣ್ ಏಳು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆದರೆ, ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆತೇ ಇಲ್ಲವೋ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ. ಹಾಗೆ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪರಿಶೀಲಿಸುತ್ತಿದ್ದು, ಕೂಲಂಕಷ ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ:ಹೆಂಡತಿ ಮೇಲಿನ ಕೋಪಕ್ಕೆ ಮಗಳನ್ನೇ ಹತ್ಯೆಗೈದ ತಂದೆ!