ಪಾಲಕ್ಕಾಡ್ (ಕೇರಳ): ಒಡಹುಟ್ಟಿದ ಸಹೋದರಿ ಮೇಲೆ ಕಾಮುಕ ಅಣ್ಣನೊಬ್ಬ ನಿರಂತರವಾಗಿ ಅತ್ಯಾಚಾರವೆಸಗಿರುವ ಪರಿಣಾಮ ಆಕೆ ಗರ್ಭಿಣಿಯಾಗಿರುವ ಪ್ರಕರಣ ಕೇರಳದ ಪಾಲಕ್ಕಾಡ್ನಲ್ಲಿ ನಡೆದಿದೆ. ಆರೋಪಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಾಲಕ್ಕಾಡ್ನ ಮನ್ನಾರ್ಕಾಡ್ನಲ್ಲಿ ಈ ಘಟನೆ ನಡೆದಿದ್ದು, 13 ವರ್ಷದ ಸಹೋದರಿ ಮೇಲೆ 16 ವರ್ಷದ ಕಾಮುಕ ಸಹೋದರ ಈ ಕೃತ್ಯವೆಸಗಿದ್ದಾನೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಒಂದು ತಿಂಗಳ ಹಿಂದೆ ಬಾಲಕಿ ತಾಲೂಕು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಆರೋಪಿ ಬಂಧನ ಮಾಡಲಾಗಿದೆ.