ಕರ್ನಾಟಕ

karnataka

ETV Bharat / bharat

ಅಂಗಾಂಗ ದಾನ ಮಾಡಿ ಹಲವು ಮಕ್ಕಳ ಬಾಳಿಗೆ ಬೆಳಕಾದ 16 ತಿಂಗಳ ಕಂದಮ್ಮ - 16 ತಿಂಗಳ ಮೃತ ಮಗುವಿನ ಕುಟುಂಬ

ಬ್ರೈನ್​ ಡೆಡ್​ ಎಂದು ಗುರುತಿಸಲ್ಪಟ್ಟ 16 ತಿಂಗಳ ಮಗುವೊಂದು ಅನೇಕ ಮಕ್ಕಳ ಜೀವ ಉಳಿಸಿರುವ ಘಟನೆ ನಡೆದಿದೆ.

16 month old baby dies
16 month old baby dies

By

Published : Aug 25, 2022, 9:50 PM IST

ನವದೆಹಲಿ:ದೆಹಲಿಯ ಏಮ್ಸ್​​​ನಲ್ಲಿ ಬ್ರೈನ್​ ಡೆಡ್​​ ಎಂದು ಘೋಷಿಸಲ್ಪಟ್ಟ 16 ತಿಂಗಳ ಮೃತ ಮಗುವಿನ ಕುಟುಂಬ ಇತರರ ಜೀವ ಉಳಿಸಲು ಸಹಾಯ ಮಾಡುವ ಉದ್ದೇಶದಿಂದ ಮಗುವಿನ ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ ಅನೇಕ ಮಕ್ಕಳ ಬಾಳಿಗೆ ಮಗು ಬೆಳಕಾಗಿದೆ.

ಪುಟಾಣಿ ರಿಶಾಂತ್​ ಆಗಷ್ಟೇ ಹೆಜ್ಜೆ ಇಡಲು ಪ್ರಾರಂಭಿಸಿದ್ದ. ಆದರೆ, ಆಗಸ್ಟ್​​ 17ರಂದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣವೇ ತಂದೆ ಉಪಿಂದರ್ ಮಗುವನ್ನು​​​ ನಿವಾಸದ ಪಕ್ಕದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಜೈಪ್ರಕಾಶ್​ ನಾರಾಯಣ್ ಅಪೆಕ್ಸ್​ ಟ್ರಾಮಾ ಸೆಂಟರ್​​ಗೆ ದಾಖಲಿಸಲಾಗಿತ್ತು. ಆಗಸ್ಟ್​​ 24ರಂದು ಬ್ರೈನ್​ ಸ್ಟೆಮ್​ ಡೆಡ್​ ಎಂದು ಘೋಷಣೆ ಮಾಡಲಾಗಿತ್ತು.

ಇದನ್ನೂ ಓದಿ:ಅಪಘಾತದಲ್ಲಿ ಯುವಕನ ಬ್ರೈನ್ ಡೆಡ್; ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ

ದುಃಖಿತ ಕುಟುಂಬಕ್ಕೆ ORBO, AIIMS ವೈದ್ಯರು ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಿದ್ದರು. ಹೀಗಾಗಿ, ಕುಟುಂಬ ಅಂಗಾಂಗ ದಾನ ಮಾಡಲು ಒಪ್ಪಿಕೊಂಡಿದೆ. ಆರ್ಗನ್​​ ರಿಟ್ರೀವಲ್​ ಬ್ಯಾಂಕಿಂಗ್​​ ಆರ್ಗನೈಸೇಶನ್​​(ORBO) ಮುಖ್ಯಸ್ಥರಾದ ಡಾ.ಆರತಿ ವಿಜ್​ ಪ್ರಕಾರ, ಮಕ್ಕಳ ಯಶಸ್ವಿ ಅಂಗಾಂಗ ಮರುಪಡೆಯುವಿಕೆ ಮತ್ತು ಕಸಿ ಮಾಡುವಲ್ಲಿ ಸಂಭಾವ್ಯ ದಾನಿಗಳ ಗುರುತಿಸುವಿಕೆ ಮತ್ತು ನಿರ್ವಹಣೆಯು AIIMS ನಿಂದ ನಡೆಯುತ್ತಿದ್ದು, ಸದ್ಯ ಅಂತಹ ರೋಗಿಗಳ ಹುಡುಕಾಟ ನಡೆಸಲಾಗ್ತಿದೆ ಎಂದಿದ್ದಾರೆ.

ಕೆಲ ಮಕ್ಕಳು ವಿವಿಧ ಅಂಗಾಂಗಗಳ ಸಮಸ್ಯೆಯಿಂದ ಬಳಲುತ್ತಿದ್ದು, ಅಂತಹವರಿಗೆ ಈ ಮಗುವಿನ ಅಂಗ ಕಸಿ ಮಾಡುವ ಕೆಲಸ ನಡೆಯಲಿದೆ. ಈಗಾಗಲೇ ಕೆಲ ಮಕ್ಕಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಕಸಿ ನಡೆಸಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

16 ತಿಂಗಳ ರಿಶಾಂತ್​ ಮನೆಯಲ್ಲಿ ಕಿರಿಯವನು. ಆತನ ಐವರು ಸಹೋದರಿಯರು ತುಂಬಾ ಪ್ರೀತಿಸುತ್ತಿದ್ದರು. ಆದರೆ, ವಿಧಿ ಆಟಕ್ಕೆ ಪ್ರಾಣ ಕಳೆದುಕೊಂಡಿದ್ದಾನೆಂದು ತಂದೆ ಕಣ್ಣೀರು ಹಾಕಿದ್ದಾರೆ. ಆದರೆ, ಇದೀಗ ಆತನ ಅಂಗಗಳಿಂದ ಇತರರ ಜೀವ ಉಳಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details