ಕರ್ನಾಟಕ

karnataka

ETV Bharat / bharat

ಬೆಳ್ಳಂಬೆಳಗ್ಗೆ ಸಬ್​ವೇಗೆ ಡಿಕ್ಕಿ ಹೊಡೆದ ಬಸ್​.. ಇಬ್ಬರು ಗರ್ಭಿಣಿಯರು ಸೇರಿ 16 ಜನರಿಗೆ ಗಾಯ! - ಮುಂಬೈ ರಸ್ತೆ ಅಪಘಾತ,

ಚಾಲಕ ನಿದ್ರೆಗೆ ಜಾರಿದ್ದರಿಂದ ಬಸ್ ಸಬ್ವೇ ಗೇಟ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಚಾಲಕ ಸೇರಿದಂತೆ 16 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ..

16 injured in bus accident, 16 injured in bus accident in Mumbai, Mumbai road accident, Mumbai road accident news, ರಸ್ತೆ ಅಪಘಾತದಲ್ಲಿ 16 ಜನರಿಗೆ ಗಾಯ, ಮುಂಬೈಯಲ್ಲಿ ರಸ್ತೆ ಅಪಘಾತದಲ್ಲಿ 16 ಜನರಿಗೆ ಗಾಯ, ಮುಂಬೈ ರಸ್ತೆ ಅಪಘಾತ, ಮುಂಬೈ ರಸ್ತೆ ಅಪಘಾತ ಸುದ್ದಿ,
ಬೆಳ್ಳಂಬೆಳಗ್ಗೆ ಸಬ್​ವೇಗೆ ಡಿಕ್ಕಿ ಹೊಡೆದ ಬಸ್​

By

Published : Nov 18, 2020, 1:20 PM IST

Updated : Nov 19, 2020, 6:53 AM IST

ಮುಂಬೈ:ಬೆಳ್ಳಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 16 ಜನ ಗಾಯಗೊಂಡಿರುವ ಘಟನೆ ಇಲ್ಲಿನ ಪನ್ವೆಲ್​ ಸಿಯಾನ್​ ಹೆದ್ದಾರಿಯಲ್ಲಿ ನಡೆದಿದೆ.

ಬಸ್ ಕೊಲ್ಹಾಪುರದಿಂದ ಬದಲಾಪುರಕ್ಕೆ ತೆರಳುತ್ತಿತ್ತು. ಇಂದು ಮುಂಜಾನೆ 5.30ರ ಸುಮಾರಿಗೆ ಬಸ್ ಪನ್ವೆಲ್ ಸಿಯಾನ್ ಹೆದ್ದಾರಿಯ ಪೆಟ್ರೋಲ್ ಪಂಪ್ ಬಳಿ ಚಾಲಕ ಇದ್ದಕ್ಕಿದ್ದಂತೆ ನಿದ್ರೆಗೆ ಜಾರಿದ್ದಾನೆ.

ಬೆಳ್ಳಂಬೆಳಗ್ಗೆ ಸಬ್​ವೇಗೆ ಡಿಕ್ಕಿ ಹೊಡೆದ ಬಸ್​

ಚಾಲಕ ನಿದ್ರೆಗೆ ಜಾರಿದ್ದರಿಂದ ಬಸ್ ಸಬ್ವೇ ಗೇಟ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಚಾಲಕ ಸೇರಿದಂತೆ 16 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ ಇಬ್ಬರು ಗರ್ಭಿಣಿಯರು ಮತ್ತು ನಾಲ್ವರು ಮಕ್ಕಳು ಗಾಯಗೊಂಡಿದ್ದಾವೆ. ಅಪಘಾತದ ಸುದ್ದಿ ತಿಳಿದ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ಗೋಪಿನಾಥ್ ಪಾಥಾರೆ ಮತ್ತು ಪ್ರಮೋದ್ ಸಾವಂತ್ ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯ ಕೈಗೊಂಡರು. ಪೊಲೀಸರು ತಕ್ಷಣವೇ ಅಗ್ನಿಶಾಮಕ ದಳ ಮತ್ತು ರಸ್ತೆ ಅಭಿವೃದ್ಧಿ ನಿಗಮಕ್ಕೆ ಮಾಹಿತಿ ರವಾನಿಸಿದರು.

ಸ್ಥಳಕ್ಕೆ ನಾಲ್ಕು ಆಂಬ್ಯುಲೆನ್ಸ್‌ಗಳು ದೌಡಾಯಿಸಿದವು. ಆ್ಯಬುಲೆನ್ಸ್​ ಮೂಲಕ ಗಾಯಾಳುಗಳನ್ನು ಕಾಮೋಥೆಯ ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಾಮೋಥೆಯ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Nov 19, 2020, 6:53 AM IST

ABOUT THE AUTHOR

...view details