ರಾಜ್ಯವಾರು, ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ (ಎಕ್ಸ್‌ವಿ ಎಫ್‌ಸಿ) ಅನುದಾನ 2020-21 ಮತ್ತು ಎಫ್‌ವೈ 2021-26ರ ಹಂಚಿಕೆ.
ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗ ನೀಡಿದ ಅನುದಾನದ ವರದಿ
ಹದಿನೈದನೇ ಹಣಕಾಸು ಆಯೋಗವು 2020-21ರ ಅವಧಿಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ (ಆರ್‌ಎಲ್‌ಬಿ) ರೂ. 60,750 ಕೋಟಿ ನಿಗದಿಪಡಿಸಲು ಶಿಫಾರಸು ಮಾಡಿದೆ. ಇದಲ್ಲದೇ, 2021-26ರ ಅವಧಿಗೆ ಸರಿಯಾಗಿ ರಚಿಸಲಾದ ಆರ್‌ಎಲ್‌ಬಿಗಳಿಗೆ ರೂ. 2,36,805 ಕೋಟಿ ನೀಡಲು ಶಿಫಾರಸು ಮಾಡಲಾಗಿದೆ.
ಅನ್ ಸ್ಟಾರ್ಡ್ ಪ್ರಶ್ನೆ ಸಂಖ್ಯೆ 2522:ಗ್ರಾಮ ಪಂಚಾಯಿತಿಗಳಿಗೆ ಹಣ: ಹದಿನೈದನೇ ಹಣಕಾಸು ಆಯೋಗವು 2020-21ರ ಅವಧಿಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ (ಆರ್‌ಎಲ್‌ಬಿ) ರೂ. 60,750 ಕೋಟಿ ನಿಗದಿಪಡಿಸಲು ಶಿಫಾರಸು ಮಾಡಿದೆ. ಇದಲ್ಲದೇ, 2021-26ರ ಅವಧಿಗೆ ಸರಿಯಾಗಿ ರಚಿಸಲಾದ ಆರ್‌ಎಲ್‌ಬಿಗಳಿಗೆ ರೂ. 2,36,805 ಕೋಟಿ ನೀಡಲು ಶಿಫಾರಸು ಮಾಡಲಾಗಿದೆ.
ಆಯೋಗವು ಅಂಗೀಕರಿಸಿದ ನಿಧಿಯ ಹಂಚಿಕೆಯ ಮಾನದಂಡವು ಈ ಕೆಳಗಿನವುಗಳನ್ನು ಒಳಗೊಂಡಿದೆ. ರಾಜ್ಯಗಳ ನಡುವೆ ಅಂತರ - ವಿತರಣೆಯು ಜನಸಂಖ್ಯೆಯ ಮೇಲೆ 90 ಪ್ರತಿಶತದಷ್ಟು ಮತ್ತು ರಾಜ್ಯಗಳ ಪ್ರದೇಶಗಳಲ್ಲಿ 10 ಪ್ರತಿಶತದಷ್ಟು ಹೊಂದಿದೆ. ಪಂಚಾಯತ್‌ಗಳಲ್ಲಿನ ಎಲ್ಲ ಮೂರು ಶ್ರೇಣಿಗಳು ಅನುದಾನವನ್ನು ಸ್ವೀಕರಿಸುತ್ತವೆ.
- ಗ್ರಾಮ ಪಂಚಾಯಿತಿಗಳಿಗೆ ಶೇ.70 ಕ್ಕಿಂತ ಕಡಿಮೆಯಿಲ್ಲ ಮತ್ತು ಶೇ.85 ಕ್ಕಿಂತ ಹೆಚ್ಚಿಲ್ಲ
- ಬ್ಲಾಕ್ ಪಂಚಾಯಿತಿಗಳಿಗೆ ಶೇ.10 ಕ್ಕಿಂತ ಕಡಿಮೆಯಿಲ್ಲ ಮತ್ತು ಶೇ.25 ಕ್ಕಿಂತ ಹೆಚ್ಚಿಲ್ಲ
- ಜಿಲ್ಲಾ ಪಂಚಾಯಿತಿಗಳಿಗೆ ಶೇ. 5 ಕ್ಕಿಂತ ಕಡಿಮೆಯಿಲ್ಲ ಮತ್ತು ಶೇ.15 ಕ್ಕಿಂತ ಹೆಚ್ಚಿಲ್ಲ.
ಕ್ರ. ಸಂ. | ರಾಜ್ಯ | 2020-21 (ಕೋಟಿಗಳಲ್ಲಿ ) | 2021-26 (ಕೋಟಿಗಳಲ್ಲಿ ) |
1 | ಆಂಧ್ರಪ್ರದೇಶ | 2625 | 10231 |
2 | ಅರುಣಾಚಲ ಪ್ರದೇಶ | 231 | 900 |
3 | ಅಸ್ಸೋಂ | 1604 | 6253 |
4 | ಬಿಹಾರ | 5018 | 19561 |
5 | ಛತ್ತೀಸ್ಗಡ | 1454 | 5669 |
6 | ಗೋವಾ | 75 | 293 |
7 | ಗುಜರಾತ್ | 3195 | 12455 |
8 | ಹರಿಯಾಣ | 1264 | 4929 |
9 | ಹಿಮಾಚಲ ಪ್ರದೇಶ | 429 | 1673 |
10 | ಜಾರ್ಖಂಡ್ | 1689 | 6585 |
11 | ಕರ್ನಾಟಕ | 3217 | 12539 |
12 | ಕೇರಳ | 1628 | 6344 |
13 | ಮಧ್ಯಪ್ರದೇಶ | 3984 | 15527 |
14 | ಮಹಾರಾಷ್ಟ್ರ | 5827 | 22713 |
15 | ಮಣಿಪುರ | 177 | 690 |
16 | ಮೇಘಾಲಯ | 182 | 711 |
17 | ಮೀಜೊರಾಂ | 93 | 362 |
18 | ನಾಗಾಲ್ಯಾಂಡ್ | 125 | 486 |
19 | ಒಡಿಶಾ | 2258 | 8800 |
20 | ಪಂಜಾಬ್ | 1388 | 5410 |
21 | ರಾಜಸ್ಥಾನ | 3862 | 15053 |
22 | ಸಿಕ್ಕಿಂ | 42 | 165 |
23 | ತಮಿಳುನಾಡು | 3607 | 14059 |
24 | ತೆಲಂಗಾಣ | 1847 | 7201 |
25 | ತ್ರಿಪುರ | 191 | 746 |
26 | ಉತ್ತರಪ್ರದೇಶ | 9752 | 38012 |
27 | ಉತ್ತರಾಂಖಂಡ | 574 | 2239 |
28 | ಪಶ್ಷಿಮ ಬಂಗಾಳ | 4412 | 17199 |
| | 60,750 | 2,36,805 |