ಕರ್ನಾಟಕ

karnataka

ETV Bharat / bharat

ಪಿರಾನ್​ ಕಲಿಯಾರ್​ ಉರುಸ್​ನಲ್ಲಿ ಭಾಗವಹಿಸಲು ರೂರ್ಕಿಗೆ ಬಂದ 150 ಪಾಕಿಸ್ತಾನಿ ಭಕ್ತರು - ಉರುಸ್​ ಸಂಘಟನಾ ಸಮಿತಿ ಸಂಚಾಲಕ

ಉಭಯ ದೇಶಗಳ ಜನರ ನಡುವೆ ಸೌಹಾರ್ದತೆ ಮೂಡಿಸಲು ಭಕ್ತರು ತಮ್ಮೊಂದಿಗೆ ಗಂಗಾಜಲವನ್ನು ಲಾಹೋರ್‌ನ ಶಿವ ದೇವಾಲಯಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಉರುಸ್​ ಸಂಘಟನಾ ಸಮಿತಿ ಸಂಚಾಲಕ ಅಫ್ಜಲ್ ಮಂಗಳೋರಿ ತಿಳಿಸಿದ್ದಾರೆ.

150 Pakistani devotees came to Roorkee to participate in Piran Kaliyar Urus
ಪಿರಾನ್​ ಕಲಿಯಾರ್​ ಉರುಸ್​ನಲ್ಲಿ ಭಾಗವಹಿಸಲು ರೂರ್ಕಿಗೆ ಬಂದ 150 ಪಾಕಿಸ್ತಾನಿ ಭಕ್ತರು

By

Published : Oct 7, 2022, 4:53 PM IST

ರೂರ್ಕಿ(ಉತ್ತರಾಖಂಡ):ಪಿರಾನ್ ಕಲಿಯಾರ್ ಅವರ 754 ನೇ ವಾರ್ಷಿಕ ಉರುಸ್​ನಲ್ಲಿ ಪಾಲ್ಗೊಳ್ಳಲು 150 ಪಾಕಿಸ್ತಾನಿ ಭಕ್ತರ ತಂಡ ಶುಕ್ರವಾರ ಭಕ್ತರು ಲಾಹೋರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಉತ್ತರಾಖಂಡದ ರೂರ್ಕಿಗೆ ತಲುಪಿದ್ದು, ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಯಾತ್ರಾರ್ಥಿಗಳನ್ನೆಲ್ಲ ಹೂವಿನ ಹಾರ ಹಾಕಿ ಸಂಭ್ರಮದಿಂದ ಸ್ವಾಗತಿಸಲಾಯಿತು. ನಂತರ ಅವರನ್ನು ಭಾರಿ ಭದ್ರತೆ ನೀಡಿ ಬಸ್‌ಗಳಲ್ಲಿ ಪೀರನ್ ಕಾಳಿಯಾರ್‌ಗೆ ಕಳುಹಿಸಲಾಯಿತು.

ಉರುಸ್​ ಆಚರಣೆ ಮುಗಿಯುವವರೆಗೆ ಯಾತ್ರಾರ್ಥಿಗಳು ಒಂದು ವಾರದವರೆಗೆ ಪಿರಾನ್ ಕಲಿಯಾರ್‌ನಲ್ಲಿರುವ ಸಬ್ರಿ ಅತಿಥಿ ಗೃಹದಲ್ಲಿ ತಂಗಲಿದ್ದಾರೆ. ಆಚರಣೆ ನಂತರ ಅವರು ಲಾಹೋರಿ ಎಕ್ಸ್‌ಪ್ರೆಸ್‌ನಲ್ಲಿ ಪಾಕಿಸ್ತಾನಕ್ಕೆ ಹಿಂದಿರುಗಲಿದ್ದಾರೆ.

ಪಿರಾನ್​ ಕಲಿಯಾರ್​ ಉರುಸ್​ನಲ್ಲಿ ಭಾಗವಹಿಸಲು ರೂರ್ಕಿಗೆ ಬಂದ 150 ಪಾಕಿಸ್ತಾನಿ ಭಕ್ತರು

ಉರುಸ್​ ಸಂಘಟನಾ ಸಮಿತಿ ಸಂಚಾಲಕ ಹಾಗೂ ಅಂತಾರಾಷ್ಟ್ರೀಯ ಕವಿ ಅಫ್ಜಲ್ ಮಂಗಳೋರಿ ಮಾತನಾಡಿ, ಉಭಯ ದೇಶಗಳ ಜನರ ನಡುವೆ ಸೌಹಾರ್ದತೆ ಮೂಡಿಸಲು ಭಕ್ತರು ತಮ್ಮೊಂದಿಗೆ ಗಂಗಾಜಲವನ್ನು ಲಾಹೋರ್‌ನ ಶಿವ ದೇವಾಲಯಕ್ಕೆ ಕೊಂಡೊಯ್ಯಲಿದ್ದಾರೆ. ಅಕ್ಟೋಬರ್ 10 ರಂದು ಪಿರಾನ್ ಕಳಿಯಾರಿನಲ್ಲಿ ಡಾ.ಕಲ್ಪನಾ ಸೈನಿ ಮತ್ತು ಸ್ವಾಮಿ ಯತೀಶ್ವರಾನಂದ ಮಹಾರಾಜ್ ಅವರಿಂದ ಗಂಗಾಜಲವನ್ನು ಪಾಕಿಸ್ತಾನಿ ಬ್ಯಾಚ್ ನಾಯಕನಿಗೆ ನೀಡಲಾಗುವುದು. ಅಲ್ಲದೇ, ಭೇಟಿ ನೀಡುವ ಯಾತ್ರಾರ್ಥಿಗಳಿಗೆ ದರ್ಗಾ ಸಬೀರ್‌ನ ತಬ್ರೂಕ್ (ಸ್ಮರಣಿಕೆ) ಅನ್ನು ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ನೀಡಲಿದ್ದಾರೆ ಎಂದು ಹೇಳಿದರು.

ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ರೂರ್ಕಿಗೆ ಆಗಮಿಸುವ ಯಾತ್ರಾರ್ಥಿಗಳಿಗೆ ವೀಸಾ ನೀಡಿದೆ. ಸದ್ಭಾವನೆ ಮತ್ತು ವಿಶ್ವಶಾಂತಿಯ ಸಂದೇಶದೊಂದಿಗೆ 150ಕ್ಕೂ ಹೆಚ್ಚು ಯಾತ್ರಿಕರನ್ನು ಒಳಗೊಂಡ ತಂಡ ಐದು ವರ್ಷಗಳ ನಂತರ ಭಾರತಕ್ಕೆ ಬರುತ್ತಿದೆ 2017 ರಲ್ಲಿ, ಪಾಕಿಸ್ತಾನದಿಂದ 153 ಯಾತ್ರಿಕರು ಉರುಸ್​ನಲ್ಲಿ ಭಾಗವಹಿಸಿದ್ದರು ಎಂದರು.

ಪಾಕಿಸ್ತಾನದ ಅತಿದೊಡ್ಡ ದರ್ಗಾವಾದ ಬಾಬಾ ಫರೀದ್ ಪಾಕಪಟ್ಟಣದ ದಿವಾನ್ ಸಾಹೇಬ್ ಅಹ್ಮದ್ ಮಸೂದ್ ಫರಿದಿ ಅವರ ಹೆಚ್ಚಿನ ಪದ್ಯಗಳನ್ನು ಸಿಖ್ಖರ ಪವಿತ್ರ ಪುಸ್ತಕ ಗುರು ಗ್ರಂಥ ಸಾಹಿಬ್‌ನಲ್ಲಿ ಬರೆಯಲಾಗಿದೆ. ಅವರು ಮೊದಲ ಬಾರಿಗೆ ಗುಂಪಿನಲ್ಲಿ ಆಗಮಿಸಿದ್ದಾರೆ. ಇದರೊಂದಿಗೆ ಲಾಹೋರ್‌ನ ದರ್ಗಾ ಡಾಟಾ ದರ್ಬಾರ್‌ನ ಸಾಹಿಬ್ಜಾದಾ ಮೊಹಮ್ಮದ್ ಶಾಫಿ ಕೂಡ ಬ್ಯಾಚ್‌ನಲ್ಲಿದ್ದಾರೆ. ಉರುಸ್​ ನಡೆಯುವ ಸ್ಥಳದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಪಿರಾನ್ ಕಳಿಯಾರ ಉರುಸ್​ ವಿಶೇಷ: ರೂರ್ಕಿಯ ಪಿರಾನ್ ಕಲಿಯಾರ್​ನಲ್ಲಿ ಪ್ರತೀ ವರ್ಷ ಉರುಸ್​ ಆಯೋಜಿಸಲಾಗುತ್ತದೆ. ಸುಮಾರು 700 ವರ್ಷಗಳಿಂದಲೂ ಈ ಉರುಸ್​ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಈ ಉರುಸ್​ನಲ್ಲಿ ಭಾಗವಹಿಸಲು ದೇಶ ವಿದೇಶಗಳಿಂದ ಲಕ್ಷಾಂತರ ಯಾತ್ರಿಕರು ಇಲ್ಲಿಗೆ ಬರುತ್ತಾರೆ. ಉರ್ಸ್ ಸಮಯದಲ್ಲಿ ಸಾಂಪ್ರದಾಯಿಕ ಸುಫಿಯಾನ ಕಲಾಂ ಮತ್ತು ಕವ್ವಾಲಿಗಳು ಇಲ್ಲಿನ ವಿಶೇಷ ಆಕರ್ಷಣೆ. ವಾರ್ಷಿಕ ಉರುಸ್​ ಆಯೋಜಿಸಲು ಉತ್ತರಾಖಂಡ ಪ್ರವಾಸೋದ್ಯಮದಿಂದ ಹಣವನ್ನು ಸಹ ನೀಡಲಾಗುತ್ತದೆ.

ಇದನ್ನೂ ಓದಿ:ಅಂಕೋಲಾದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಉರುಸ್

ABOUT THE AUTHOR

...view details