ಕರ್ನಾಟಕ

karnataka

ETV Bharat / bharat

ಪೇಪರ್ ಎಸೆದಿದ್ದಕ್ಕೆ ತರಗತಿಯಲ್ಲಿ ಆರಂಭವಾದ ಜಗಳ SSLC ವಿದ್ಯಾರ್ಥಿ ಸಾವಿನಲ್ಲಿ ಅಂತ್ಯ! - thrown a paper ball

ಈ ಬಾಲಕ ತರಗತಿಯಲ್ಲಿ ಪೇಪರ್​ ಬಾಲ್​ ಅನ್ನು ತನ್ನ ಸಹಪಾಠಿ ಕಡೆಗೆ ಎಸೆದಿದ್ದ. ಇಷ್ಟಕ್ಕೆ ಜಗಳ ಶುರುವಾಗಿದ್ದು, ಅದು ಓರ್ವ ವಿದ್ಯಾರ್ಥಿಯ ಕೊಲೆಯಲ್ಲಿ ಅಂತ್ಯವಾಗಿದೆ.

student dies
ಎಸ್​​ಎಸ್​ಎಲ್​ಸಿ ವಿದ್ಯಾರ್ಥಿ ಸಾವು

By

Published : Mar 3, 2022, 3:23 PM IST

Updated : Mar 3, 2022, 3:33 PM IST

ಹೈದರಾಬಾದ್(ತೆಲಂಗಾಣ):ಶಾಲಾ ತರಗತಿಯಲ್ಲಿ ಸಹಪಾಠಿಗಳೊಂದಿಗೆ ನಡೆದ ಜಗಳವು ಓರ್ವ ವಿದ್ಯಾರ್ಥಿಯ ಸಾವಿನಲ್ಲಿ ಅಂತ್ಯವಾಗಿದೆ. ಸಹಪಾಠಿಗಳ ಹೊಡೆತದಿಂದ ತಲೆಗೆ ಪೆಟ್ಟು ಬಿದ್ದು 15 ವರ್ಷದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಮುತ್ತಿನನಗರಿಯಲ್ಲಿ ನಡೆದಿದೆ. ಕೃಷ್ಣ ನಗರದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮೃತ ವಿದ್ಯಾರ್ಥಿ ಎಸ್​​ಎಸ್​​ಎಲ್​ಸಿ ಓದುತ್ತಿದ್ದ ಎಂದು ತಿಳಿದುಬಂದಿದೆ.

ಈ ಬಾಲಕ ತರಗತಿಯಲ್ಲಿ ಪೇಪರ್​ ಬಾಲ್​ ಅನ್ನು ತನ್ನ ಸಹಪಾಠಿ ಕಡೆಗೆ ಎಸೆದಿದ್ದ. ಇಷ್ಟಕ್ಕೆ ಜಗಳ ಶುರುವಾಗಿದೆ. ಈ ವೇಳೆ ಮತ್ತೋರ್ವ ವಿದ್ಯಾರ್ಥಿ ಈ ಬಾಲಕನಿಗೆ ಹೊಡೆದಿದ್ದಾನೆ. ಆಗ ಇವನು ಬೆಂಚ್​ ಮೇಲೆ ಬಿದ್ದಿದ್ದಾನೆ. ಇದರಿಂದ ತಲೆಗೆ ಪೆಟ್ಟಾಗಿತ್ತು. ನಂತರ ಆಸ್ಪತ್ರೆಗೆ ಆತನನ್ನು ಸೇರಿಸಲಾಗಿತ್ತು. ಆದರೆ, ಅಷ್ಟರಲ್ಲೇ ಬಾಲಕ ಕೊನೆಯುಸಿರೆಳೆದಿದ್ದ ಎಂದು ಜುಬ್ಲಿ ಹಿಲ್ಸ್​ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಎನ್​ಸಿಪಿ ಶಾಸಕನಿಂದ 'ತಲೆಕೆಳಗಾದ' ಪ್ರತಿಭಟನೆ

ಈ ಘಟನೆ ನಂತರ ಇಬ್ಬರು ಸಹಪಾಠಿಗಳು ತಲೆಮರೆಸಿಕೊಂಡಿದ್ದಾರೆ. ಶಾಲಾ ಕೊಠಡಿಯಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Last Updated : Mar 3, 2022, 3:33 PM IST

ABOUT THE AUTHOR

...view details