ಮಲಪ್ಪುರಂ (ಕೇರಳ):21 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 15 ವರ್ಷದ ಬಾಲಕನನ್ನು ಕೇರಳ ಪೊಲೀಸರು ಇಂದು ಬಂಧಿಸಿದ್ದಾರೆ. ಯತ್ನ ವಿಫಲವಾಗಿದ್ದಕ್ಕೆ ಆರೋಪಿ ಯುವತಿ ಮುಖಕ್ಕೆ ಕಲ್ಲಿನಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾನೆ.
ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿಯ ಕೊಟ್ಟುಕರ ಎಂಬ ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಕೊಟ್ಟುಕರ ನಿವಾಸಿಯಾಗಿರುವ ಯುವತಿಯನ್ನು ಅದೇ ಊರಿನ ಬಾಲಕ ಹಿಂಬಾಲಿಸಿ, ಆಕೆಯನ್ನು ಏಕಾಏಕಿ ರಸ್ತೆ ಬದಿಗೆ ಎಳೆದುಕೊಂಡು ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಆತನಿಂದ ಹಲ್ಲೆಗೊಳಗಾದ ಯುವತಿ ಕಿರುಚಾಡುತ್ತಾ, ಸಹಾಯ ಕೋರಿ ಸಮೀಪದ ಮನೆಯೊಂದಕ್ಕೆ ಓಡಿದ್ದಾಳೆ.