ರಾಯಪುರ(ಛತ್ತೀಸ್ಗಢ):ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಕಾನ್ಸ್ಟೇಬಲ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ 15 ತೃತೀಯ ಲಿಂಗಿಗಳು ಈ ಪರೀಕ್ಷೆ ಪಾಸ್ ಮಾಡಿದ್ದು, ಖಾಕಿ ಬಟ್ಟೆ ಹಾಕಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.
ದೈಹಿಕ ಪರೀಕ್ಷೆಯ ಫಲಿತಾಂಶ ಇಂದು ಬಿಡುಗಡೆಯಾಗಿದ್ದು, ಇದರಲ್ಲಿ 15 ತೃತೀಯ ಲಿಂಗಿಗಳು ಪಾಸ್ ಆಗಿರುವ ಮಾಹಿತಿ ಇದೆ. ಇದರ ಬಗ್ಗೆ ಮಾತನಾಡಿರುವ ತೃತೀಯ ಲಿಂಗಿಗಳು, ಆಯ್ಕೆಯಿಂದ ತಮಗೆ ಭಾರೀ ಸಂತೋಷವಾಗಿದ್ದು, ದೈಹಿಕ ಭಿನ್ನಾಭಿಪ್ರಾಯದ ನಡುವೆ ಕೂಡ 15 ಸದಸ್ಯರ ಆಯ್ಕೆ ಮಾಡಿದ್ದಕ್ಕಾಗಿ ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ದಾರೆ.