ನವದೆಹಲಿ:ಭಾರತ-ಚೀನಾ ಯೋಧರ ನಡುವೆ ಕಳೆದ ವಾರ ಸಿಕ್ಕಿಂನ ನಾಕು ಲಾ ಗಡಿ ಭಾಗದಲ್ಲಿ ಸಂಘರ್ಷ ನಡೆದಿದ್ದು, ಇದರಲ್ಲಿ 15 ಭಾರತೀಯ ಯೋಧರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಇದರ ಬೆನ್ನಲ್ಲೇ ಕೆಲ ಚೀನಾ ಯೋಧರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ ನಡೆದ ಘರ್ಷಣೆ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದು, ಇದಾದ ಬಳಿಕ ಉಭಯ ದೇಶಗಳ ನಡುವೆ ಅನೇಕ ಸುತ್ತಿನ ಮಿಲಿಟರಿ ಮಾತುಕತೆ ನಡೆದಿವೆ. ಅದರಂತೆ ಕಳೆದ ಎರಡು ದಿನಗಳ ಹಿಂದೆ ಸಹ 9ನೇ ಸುತ್ತಿನ ಕಾರ್ಪ್ಸ್ ಮಾತುಕತೆ ನಡೆದಿದೆ. ಇದಕ್ಕೂ ಮುಂಚಿತವಾಗಿ ಭಾರತ-ಚೀನಾ ಯೋಧರು ಸಂಘರ್ಷ ನಡೆಸಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.