ಕರ್ನಾಟಕ

karnataka

ETV Bharat / bharat

ಟ್ರಕ್​ ಪಲ್ಟಿಯಾಗಿ 15 ಕೂಲಿ ಕಾರ್ಮಿಕರ ದಾರುಣ ಸಾವು, 2 ಲಕ್ಷ ರೂ. ಪರಿಹಾರ ಘೋಷಣೆ - ಜಲಗಾಂವ್​ ರಸ್ತೆ ಅಪಘಾತ

15 killed in road accident, 15 killed in road accident at jalgaon, jalgaon road accident, jalgaon road accident news, ರಸ್ತೆ ಅಪಘಾತದಲ್ಲಿ 15 ಜನ ಸಾವು, ಜಲಗಾಂವ್​ನಲ್ಲಿ ರಸ್ತೆ ಅಪಘಾತದಲ್ಲಿ 15 ಜನ ಸಾವು, ಜಲಗಾಂವ್​ ರಸ್ತೆ ಅಪಘಾತ, ಜಲಗಾಂವ್​ ರಸ್ತೆ ಅಪಘಾತ ಸುದ್ದಿ,
ಟ್ರಕ್​ ಪಲ್ಟಿಯಾಗಿ 15 ಕೂಲಿ ಕಾರ್ಮಿಕರ ದಾರುಣ ಸಾವು

By

Published : Feb 15, 2021, 7:53 AM IST

Updated : Feb 15, 2021, 4:04 PM IST

07:48 February 15

ಮಹಾರಾಷ್ಟ್ರದಲ್ಲಿ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 15 ಜನ ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬಾಳೆ ಹಣ್ಣುಗಳನ್ನು ತುಂಬಿಕೊಂಡು ಸಾಗುತ್ತಿದ್ದ ಟ್ರಕ್​ ಏರಿದ್ದವರು ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದಿದ್ದಾರೆ.

ಟ್ರಕ್​ ಪಲ್ಟಿಯಾಗಿ 15 ಕೂಲಿ ಕಾರ್ಮಿಕರ ದಾರುಣ ಸಾವು

ಜಲಗಾಂವ್​:ಬಾಳೆ ಹಣ್ಣುಗಳನ್ನು ಸಾಗಿಸುತ್ತಿದ್ದ ಟ್ರಕ್​ವೊಂದು ಪಲ್ಟಿಯಾಗಿ 15 ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಯಾವಲ್​ ತಾಲೂಕಿನ ಕಿಂಗಾಂವ್​ ಬಳಿ ನಡೆದಿದೆ.  

ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿಯ ಪ್ರಕಾರ, ಧುಲೆ ಜಿಲ್ಲೆಯ ನೆರ್​ನಿಂದ ಟ್ರಕ್​ವೊಂದು ಬಾಳೆಹಣ್ಣುಗಳನ್ನು ತುಂಬಿಕೊಂಡು ರಾವರ್​ಗೆ ಬರುತ್ತಿತ್ತು. ಈ ಟ್ರಕ್​ ಜೊತೆ 21 ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಕಿಂಗಾಂವ್ ಬಳಿ ಬರುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡ ಟ್ರಕ್ ಪಲ್ಟಿಯಾಗಿದೆ.  

ಟ್ರಕ್​ ಪಲ್ಟಿಯಾಗಿರುವುದರಿಂದ 15 ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚು ಮಹಿಳೆಯರು ಮತ್ತು ಮಕ್ಕಳಿದ್ದಾಎ. ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಸ್ಥಳೀಯರೊಂದಿಗೆ ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು.  

ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರು ಅಭೂಡಾ, ಕೇರಳ ಮತ್ತು ರಾವರ್ ತಾಲೂಕಿನವರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪರಿಹಾರ ಘೋಷಣೆ

ಅಪಘಾತದಲ್ಲಿ ಸಾವನ್ನಪ್ಪಿರುವ ವ್ಯಕ್ತಿಗಳಿಗೆ ಪರಿಹಾರ ಘೋಷಣೆ ಮಾಡಲಾಗಿದ್ದು, 2 ಲಕ್ಷ ರೂ. ನೀಡುವುದಾಗಿ ಮುಖ್ಯಮಂತ್ರಿ ಕಚೇರಿ ಪ್ರಕಟಣೆ ಹೊರಡಿಸಿದೆ. ಘಟನೆ ಬಗ್ಗೆ ತೀವ್ರ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿ ವ್ಯಕ್ತಿಗೆ 2 ಲಕ್ಷ ರೂ. ಮೃತ ಕುಟುಂಬಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. 

Last Updated : Feb 15, 2021, 4:04 PM IST

ABOUT THE AUTHOR

...view details