ವರ್ಕಾ (ಗೋವಾ):ಶನಿವಾರ ಇಲ್ಲಿನ ವರ್ಕಾ ಬೀಚ್ ಬಳಿ ಅಕ್ರಮ ಕ್ಯಾಸಿನೊ ಮೇಲೆ ದಾಳಿ ನಡೆಸಿರುವ ಗೋವಾ ಪೊಲೀಸರು, ಜೂಜಾಟ- ಮೋಜು ಮಸ್ತಿಯಲ್ಲಿ ತೊಡಗಿದ್ದ 15 ಜನರನ್ನು ಬಂಧಿಸಿದ್ದಾರೆ.
ಸೂಕ್ತ ಮಾಹಿತಿ ಮೇರೆಗೆ ಕೊಲ್ವಾ ಮತ್ತು ಮಾರ್ಗಾವ್ ಪಟ್ಟಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 15 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.