ಚೆನ್ನೈ:ಬರೋಬ್ಬರಿ 100 ಕೋಟಿ ರೂ. ಮೌಲ್ಯದ 15 ಕೆಜಿ ಹೆರಾಯಿನ್ ವಶಕ್ಕೆ ಪಡೆದುಕೊಳ್ಳುವಲ್ಲಿ ಇಲ್ಲಿನ ಅಧಿಕಾರಿಗಳು ಯಶಸ್ವಿಯಾಗಿದ್ದು, ಇಬ್ಬರ ಬಂಧನ ಮಾಡಿದ್ದಾರೆ. ಚೆನ್ನೈನ ಏರ್ಪೋರ್ಟ್ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಾಂಜೇನಿಯಾ ಪ್ರಜೆಗಳ ಬಂಧನ ಮಾಡಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚೆನ್ನೈ ಏರ್ಪೋರ್ಟ್ನಲ್ಲಿ 100 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ, ಇಬ್ಬರ ಬಂಧನ - ಚೆನ್ನೈ ಏರ್ಪೋರ್ಟ್ನಲ್ಲಿ 100 ಕೋಟಿ ರೂ
ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವುದಾಗಿ ಸುಳ್ಳು ಹೇಳಿ ಭಾರತಕ್ಕೆ ಬಂದಿದ್ದ ಇಬ್ಬರ ಬಂಧನ ಮಾಡಿರುವ ಕಸ್ಟಮ್ಸ್ ಅಧಿಕಾರಿಗಳು ಅವರಿಂದ 100 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದುಕೊಂಡಿದ್ದಾರೆ.
ಆಫ್ರಿಕಾದಿಂದ ಭಾರತಕ್ಕೆ ಕೆಲ ಮಾದಕ ದ್ರವ್ಯ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು 46 ವರ್ಷದ ಮಹಿಳೆ ಹಾಗೂ ಆಕೆಯ ಸಹಚರನನ್ನ ವಶಕ್ಕೆ ಪಡೆದುಕೊಂಡಿದೆ.
ಪ್ಯಾಕೆಟ್ಗಳಲ್ಲಿ ಹೆರಾಯಿನ್ ಹಾಕಲಾಗಿದ್ದು, ಅದರಿಂದ ವಾಸನೆ ಹೊರ ಬರದಂತೆ ಕೆಲ ಮಸಾಲೆಯುಕ್ತ ಪದಾರ್ಥಗಳ ಪುಡಿ ಚಿಮುಕಿಸಲಾಗಿದೆ. ಮಹಿಳೆ ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತನ್ನ ಸಹಾಯಕನ ಜೊತೆಗೆ ವೈದ್ಯಕೀಯ ಚಿಕಿತ್ಸೆಗೆ ಬರುತ್ತಿರುವುದಾಗಿ ಹೇಳಿ ಭಾರತದ ಪ್ರಯಾಣ ಕೈಗೊಂಡಿದ್ದಳು. ಅವರಿಗೆ ಬೆಂಗಳೂರಿಗೆ ನೇರ ವಿಮಾನ ಸಿಗದ ಕಾರಣ ಚೆನ್ನೈಗೆ ಬಂದಿಳಿದಿದ್ದರು. ಇಲ್ಲೇ ಅವರ ಬಂಧನ ಮಾಡಲಾಗಿದೆ.