ಕರ್ನಾಟಕ

karnataka

ETV Bharat / bharat

ಮಾನವ ಕಳ್ಳಸಾಗಣೆ ಪ್ರಕರಣ: ವಿಚಾರಣೆ ವೇಳೆ ಗುಜರಾತ್‌ನ 15 ಏಜೆಂಟ್‌ಗಳ ಹೆಸರು ಬಯಲು - CID

ಭಾರತದಿಂದ ಅಮೆರಿಕಕ್ಕೆ ಅಕ್ರಮವಾಗಿ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಫ್ರಾನ್ಸ್ ಸರ್ಕಾರ ಬಯಲು ಮಾಡಿದೆ. ಗುಜರಾತ್‌ನ ಮೂಲದ 60ಕ್ಕೂ ಹೆಚ್ಚು ಜನರು ಸ್ವದೇಶಕ್ಕೆ ಮರಳಿದ್ದು, ಅವರ ವಿಚಾರಣೆ ವೇಳೆ ಗುಜರಾತ್‌ನ 15 ಏಜೆಂಟ್‌ಗಳು ಹೆಸರು ಬಯಲುಲಾಗಿದೆ ಎಂದು ಸಿಐಡಿ ಅಪರಾಧ ವಿಭಾಗದ ಎಡಿಜಿಪಿ ಮಾಹಿತಿ ನೀಡಿದ್ದಾರೆ.

CID
ಮಾನವ ಕಳ್ಳಸಾಗಣೆ ಪ್ರಕರಣ

By ETV Bharat Karnataka Team

Published : Jan 2, 2024, 11:05 PM IST

ಗಾಂಧಿನಗರ (ಗುಜರಾತ್): ಭಾರತದಿಂದ ಅಮೆರಿಕಕ್ಕೆ ಅಕ್ರಮವಾಗಿ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಫ್ರಾನ್ಸ್ ಸರ್ಕಾರ ಬಯಲು ಮಾಡಿದೆ. ಫ್ರಾನ್ಸ್‌ನಿಂದ ಬಂದಿರುವ ವಿಮಾನವು ಮುಂಬೈಗೆ ಮರಳಿತು. ಗುಜರಾತ್‌ನ ಮೂಲದ 60ಕ್ಕೂ ಹೆಚ್ಚು ಜನರು ಸ್ವದೇಶಕ್ಕೆ ಮರಳಿದ್ದಾರೆ. ಗುಜರಾತ್ ಸಿಐಡಿ ಕ್ರೈಂ ಎಲ್ಲಾ ಜನರನ್ನು ವಿಚಾರಣೆಗೆ ಒಳಪಡಿಸಿದೆ. ಈ ವಿಚಾರಣೆ ವೇಳೆ ಒಟ್ಟು 15 ಏಜೆಂಟರನ್ನು ಹೆಸರಗಳು ಬಯಲಾಗಿದೆ ಎಂದು ರಾಜ್ಯ ಸಿಐಡಿ ಅಪರಾಧ ವಿಭಾಗದ ಎಡಿಜಿಪಿ ರಾಜಕುಮಾರ್ ಪಾಂಡಿಯನ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಸುಮಾರು 60ಕ್ಕೂ ಹೆಚ್ಚು ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅವರಲ್ಲರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಸಮಗ್ರ ತನಿಖೆಯನ್ನು ನಡೆಸಲಾಗಿದೆ ಎಂದು ಗುಜರಾತ್ ಸಿಐಡಿ ಕ್ರೈಂನ ಎಡಿಜಿಪಿ ರಾಜ್‌ಕುಮಾರ್ ಪಾಂಡಿಯನ್ ಅವರು, ಈಟಿವಿ ಭಾರತ ಜೊತೆಗಿನ ಸಂವಾದದಲ್ಲಿ ತಿಳಿಸಿದ್ದಾರೆ.

ಸಿಐಡಿ ಕ್ರೈಂ ವಿಭಾಗದಿಂದ ತನಿಖೆ ಚುರುಕು:''ಈ ಎಲ್ಲ ಪ್ರಯಾಣಿಕರಿಂದ ವಿಮಾನದ ಟಿಕೆಟ್‌ ಹಾಗೂ ಹೋಟೆಲ್ ಟಿಕೆಟ್​ಗಳನ್ನು ಕಾಯ್ದಿರಿಸಲಾಗಿದೆ. ಈ ದಂಧೆಯಲ್ಲಿ ಯಾವ ಜನರು ಮತ್ತು ಎಷ್ಟು ಜನರು ಭಾಗಿಯಾಗಿದ್ದಾರೆ ಹಾಗೂ ಎಲ್ಲಾ ವಿಷಯಗಳ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಎಲ್ಲಾ ಜನರು ದುಬೈನಲ್ಲಿ 2 ದಿನ ತಂಗಿದ್ದು, ನಂತರ ಇನ್ನೊಬ್ಬ ಏಜೆಂಟ್ ಮೂಲಕ ಫ್ರಾನ್ಸ್ ತಲುಪಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಈಗ ಅವರು ತಂಗಿದ್ದ ಸ್ಥಳಗಳಲ್ಲಿ ಭಾಗಿಯಾಗಿರುವ ಏಜೆಂಟ್‌ಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ, ಇಲ್ಲಿನ ಏಜೆಂಟರನ್ನು ಯಾವ ವ್ಯಕ್ತಿ ಭೇಟಿ ಮಾಡಿದ್ದಾರೆ ಎನ್ನುವ ಬಗ್ಗೆಯೂ ಸಿಐಡಿ ಕ್ರೈಂ ವಿಭಾಗದಿಂದ ತನಿಖೆ ನಡೆಸಲಾಗಿದೆ.

ರಾತ್ರಿ ವೇಳೆ ಮಾತ್ರ ಕೆಲಸ ಮಾಡಬಹುದು:ಪೂರ್ವ ಅಮೆರಿಕದ ನಿಕರಾ​ಗುವಾದಲ್ಲಿ ಪ್ರವಾಸಿಗರಿಗೆ ಆಗಮನದ ವೀಸಾ ಸೌಲಭ್ಯವನ್ನು ಒದಗಿಸಲಾಗಿದೆ. ಈ ಎಲ್ಲಾ ಜನರು ಡ್ರೈವರ್ ವೀಸಾ ತೆಗೆದುಕೊಂಡು ನಿಕರಾಗುವಾದಲ್ಲಿ ಉಳಿದುಕೊಂಡರು. ನಂತರ ಅಲ್ಲಿಂದ ಮೆಕ್ಸಿಕೋ ಮತ್ತು ಮೆಕ್ಸಿಕೋದಿಂದ ಅಮೆರಿಕ ದೇಶಕ್ಕೆ ಹೋಗಲು ಯೋಜಿಸಿದ್ದರು. ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಹೊರಟಿದ್ದವರು ರಾತ್ರಿ ವೇಳೆ ಮಾತ್ರ ಕೆಲಸ ಮಾಡಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೀಗೆ ಕೆಲಸ ಸಿಕ್ಕರೆ ಅಲ್ಲಿನ ಉದ್ಯಮಿಗಳಿಗೆ ಹಾಗೂ ಮಾಲೀಕರಿಗೆ ಕಡಿಮೆ ಸಂಬಳದಲ್ಲಿ ಕೆಲಸ ಮಾಡುವವರು ಲಭ್ಯವಾಗುತ್ತಾರೆ. ಅಮೆರಿಕಕ್ಕೆ ಅಕ್ರಮವಾಗಿ ಎಂಟ್ರಿ ಕೊಡಲು ಯೋಜಿಸಿರುವ ಜನರ ವಿವರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಿದಾಗ ಒಟ್ಟು 66 ಮಂದಿಯ ಪಾಸ್‌ಪೋರ್ಟ್​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಐಡಿ ಅಪರಾಧ ವಿಭಾಗದ ಎಡಿಜಿಪಿ ರಾಜಕುಮಾರ್ ಪಾಂಡ್ಯನ್ ತಿಳಿಸಿದ್ದಾರೆ.

ಈ ಪ್ರಯಾಣಿಕರ ಹೆಸರು ಮತ್ತು ವಿಳಾಸವನ್ನು ಗಮಿಸಿದರೆ, ಅವರಲ್ಲಿರುವ ಬಹುತೇತಕರು ಮೆಹ್ಸಾನಾ, ಗಾಂಧಿನಗರ, ಆನಂದ್ ಮತ್ತು ಅಹಮದಾಬಾದ್‌ನವರು ಎನ್ನುವುದು ತಿಳಿದುಬಂದಿದೆ. ಇವರೆಲ್ಲರೂ 8ರಿಂದ 12ನೇ ತರಗತಿಯವರೆಗೆ ಮಾತ್ರ ಓದಿದ್ದಾರೆ. ಸುಮಾರು 60 ರಿಂದ 80 ಲಕ್ಷಕ್ಕೆ ಅಕ್ರಮವಾಗಿ ಅಮೆರಿಕಕ್ಕೆ ಹೋಗಲು ಯೋಜಿಸಿದ್ದರು. ಸ್ಥಳೀಯ ಏಜೆಂಟರ ಮೂಲಕ ಅಹಮದಾಬಾದ್‌ನಿಂದ ದುಬೈಗೆ, ದುಬೈ ಮೂಲಕ ನಿಕರಾಗುವಾ ತಲುಪುತ್ತಾರೆ. ಅಲ್ಲಿಂದ ಏಜೆಂಟರು ಮೂಲಕ ನರು ಅಮೆರಿಕದ ಗಡಿ ದಾಟುತ್ತಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಅಕ್ರಮವಾಗಿ ಅಮೆರಿಕಕ್ಕೆ ಹೋಗುವ ವ್ಯಕ್ತಿಗಳಿಂದ ಏಜೆಂಟರು ಒಂದು ಸಾವಿರದಿಂದ ಮೂರು ಸಾವಿರ ಡಾಲರ್ ಪಡೆಯುತ್ತಾರೆ ಎಂದು ಮಾಹಿತಿ ತಿಳಿದಿದೆ.

ಇದನ್ನೂ ಓದಿ:ಸಾಕ್ಷ್ಯಾಧಾರಗಳ ಕೊರತೆ: 2019ರ ಐಪಿಎಲ್ ಬೆಟ್ಟಿಂಗ್ ಹಗರಣ ಪ್ರಕರಣಗಳ ಮುಚ್ಚಿದ ಸಿಬಿಐ

ABOUT THE AUTHOR

...view details