ಕರ್ನಾಟಕ

karnataka

ETV Bharat / bharat

ಮಣಿಪುರದಲ್ಲಿ ಕೋಮು ಗಲಭೆ, ಉದ್ವಿಗ್ನ ಸ್ಥಿತಿ ತಡೆಗೆ 5 ದಿನ ಇಂಟರ್ನೆಟ್​ ಸೇವೆ ಬಂದ್​

ಮಣಿಪುರದಲ್ಲಿ ಕೋಮು ದಳ್ಳುರಿ ಹೊತ್ತಿಕೊಂಡಿದೆ. ವಾಹನಗಳನ್ನು ಸುಟ್ಟು ಹಾಕಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಅಹಿತಕರ ಘಟನೆ ತಡೆಯಲು ರಾಜ್ಯದಲ್ಲಿ ಇಂಟರ್ನೆಟ್​ ಸೇವೆ ಬಂದ್​ ಮಾಡಲಾಗಿದೆ.

144-section-implement-in-manipur
ಮಣಿಪುರದಲ್ಲಿ ಕೋಮು ಗಲಭೆ

By

Published : Aug 8, 2022, 10:55 AM IST

ಮಣಿಪುರ:ಕೋಮು ಗಲಭೆ ಉದ್ವಿಗ್ನತೆಗೆ ತಿರುಗಿದ ಹಿನ್ನೆಲೆಯಲ್ಲಿ ಮಣಿಪುರದಲ್ಲಿ 5 ದಿನಗಳ ಕಾಲ ಇಂಟರ್​​ನೆಟ್​ ಬಂದ್ ಮಾಡಲಾಗಿದೆ. ನಿನ್ನೆ ಸಂಜೆ ಫೌಗಕ್ಚಾವೊ ಇಖಾಂಗ್‌ನಲ್ಲಿ ಜನರು ವಾಹನವನ್ನು ಸುಟ್ಟುಹಾಕಿದ್ದು, ಆತಂಕ ಉಂಟು ಮಾಡಿದೆ. ಇದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮುಂದಿನ ಎರಡು ತಿಂಗಳವರೆಗೆ ಚುರಾಚಂದ್‌ಪುರ ಮತ್ತು ಬಿಷ್ಣುಪುರ್ ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.

Communal riots in Manipur: ಬಿಷ್ಣುಪುರದಲ್ಲಿ ಒಂದು ಸಮುದಾಯದ 3-4 ಯುವಕರು ವ್ಯಾನ್‌ಗೆ ಬೆಂಕಿ ಹಚ್ಚಿ ಉದ್ವಿಗ್ನತೆ ಸೃಷ್ಟಿಸಿದ್ದಾರೆ. ಇದು ಅಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಗಲಭೆಗೆ ಪ್ರಚೋದನೆ ನೀಡುತ್ತಿರುವ ಕಾರಣ ಇಡೀ ರಾಜ್ಯದಲ್ಲಿ 5 ದಿನಗಳ ಕಾಲ ಅಂತರ್ಜಾಲ ಸೇವೆಯನ್ನು ನಿರ್ಬಂಧಿಸಲಾಗಿದೆ.

ಎಟಿಎಸ್​ಯುಎಂ ಸಂಘಟನೆ ರಾಜ್ಯದ ಗುಡ್ಡಗಾಡು ಪ್ರದೇಶಗಳಿಗೆ ಸ್ವಾಯತ್ತತೆ ನೀಡಲು ಸ್ವಾಯತ್ತ ಜಿಲ್ಲಾ ಕೌನ್ಸಿಲ್​ ಮಸೂದೆ ಜಾರಿಗೆ ಒತ್ತಾಯಿಸಿ ಹೋರಾಟ ನಡೆಸಲಾಗುತ್ತಿದೆ. ಇದರಿಂದ ಕೆಲವೆಡೆ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ

ಅಹಿತಕರ ಘಟನೆಗಳನ್ನು ತಡೆಯಲು ಮುನ್ನೆಚ್ಚರಿಯಾಗಿ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಅಲ್ಲದೇ ಅಂತರ್ಜಾಲ ಸೇವೆಯನ್ನು ನಿರ್ಬಂಧಿಸಲಾಗಿದೆ. ಸಮುದಾಯಗಳ ಮಧ್ಯೆ ಮಾತುಕತೆ ನಡೆಸಲಾಗಿದೆ. ಆದಾಗ್ಯೂ ಜನರು ಪ್ರತಿಭಟನೆ ನಡೆಸುತ್ತಿದ್ದು, ಇದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಷ್ಣುಪುರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಓದಿ:ಖೈದಿಗೆ ಡ್ರಗ್ಸ್ ಸರಬರಾಜು: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೈಲು ಸಹಾಯಕ ಅಧೀಕ್ಷಕ

ABOUT THE AUTHOR

...view details