ಕರ್ನಾಟಕ

karnataka

ETV Bharat / bharat

14 ವರ್ಷದ ಬಾಲಕನಿಗೆ ಬೆಂಕಿ ಹಚ್ಚಿದ್ದ 7 ವರ್ಷದ ಬಾಲಕ: ತಿಂಗಳ ಬಳಿಕ ಗಾಯಾಳು ಸಾವು - ಅಪರಾಧ ಸುದ್ದಿ ಕೊಲೆ ಸುದ್ದಿ

ಮೇ 12 ರಂದು ಪ್ರೇಮ ನಗರದ ಪಂಚಮುಖಿ ವೃತ್ತದ ಬಳಿ ಬಾಲಕರಿಬ್ಬರು ಆಟವಾಡುತ್ತಿದ್ದರು. ಅದರಲ್ಲಿ ಓರ್ವ 7, ಮತ್ತೊಬ್ಬ 14 ವರ್ಷದವನಿದ್ದ. ಆಟವಾಡುತ್ತ 7 ವರ್ಷದ ಬಾಲಕ 14 ವರ್ಷದವನ ಮೇಲೆ ಡೀಸೆಲ್ ಎರಚಿ ಬೆಂಕಿ ಪೊಟ್ಟಣದಿಂದ ಬೆಂಕಿ ಹಚ್ಚಿಬಿಟ್ಟ. ಬೆಂಕಿಯಿಂದ 14 ವರ್ಷದ ಬಾಲಕ ಬೆಂದು ಒದ್ದಾಡತೊಡಗಿದ. ಕೊನೆಗೆ ಆತ ಜಾನುವಾರುಗಳಿಗೆ ಇಟ್ಟ ಕುಡಿಯುವ ನೀರಿನ ತೊಟ್ಟಿಗೆ ಜಿಗಿದು ಬೆಂಕಿ ಆರಿಸಿಕೊಂಡಿದ್ದ.

14-year-old-burned-by-7-year-old-while-playing-in-kota-dies-after-a-month
14-year-old-burned-by-7-year-old-while-playing-in-kota-dies-after-a-month

By

Published : Jun 16, 2022, 4:57 PM IST

ಕೋಟಾ: 7 ವರ್ಷದ ಅಪ್ರಾಪ್ತನೋರ್ವ ಮತ್ತೊಬ್ಬ 14 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಡೀಸೆಲ್ ಸುರಿದು ಬೆಂಕಿ ಇಟ್ಟ ಪ್ರಕರಣದಲ್ಲಿ ಗಾಯಾಳುವಾಗಿದ್ದ 14 ವರ್ಷದ ಬಾಲಕ ಒಂದು ತಿಂಗಳ ಬಳಿಕ ಮೃತಪಟ್ಟಿದ್ದಾನೆ. ಕೋಟಾ ನಗರದ ಉದ್ಯೋಗ ನಗರ ಠಾಣೆ ವ್ಯಾಪ್ತಿಯ ಪ್ರೇಮ ನಗರ ಮೂರನೇ ಸ್ಟೇಜ್​ನಲ್ಲಿ ತಿಂಗಳ ಹಿಂದೆ ಬಾಲಕನಿಗೆ ಬೆಂಕಿ ಹಚ್ಚಿದ ಈ ಘಟನೆ ನಡೆದಿತ್ತು.

ಬೆಂಕಿಯಿಂದ 14 ವರ್ಷದ ಬಾಲಕ ಶೇ 50 ರಷ್ಟು ಸುಟ್ಟುಹೋಗಿದ್ದ. ಆದರೆ ಚಿಕಿತ್ಸೆ ಫಲಿಸದೆ ಕೊನೆಗೂ ಆತ ಜೂನ್ 15 ರಂದು ಮೃತಪಟ್ಟಿದ್ದಾನೆ.

ಆರಂಭದಲ್ಲಿ ಪೊಲೀಸರು ಪ್ರಾಣಘಾತುಕ ಹಲ್ಲೆ ಎಂದು ಪ್ರಕರಣ ದಾಖಲಿಸಿದ್ದರು. ಸದ್ಯ ಇದಕ್ಕೆ ಕೊಲೆ ಆರೋಪದ ಸೆಕ್ಷನ್​ಗಳನ್ನು ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಬಾಲಕ ಹಾಗೂ ಆರೋಪಿ ಬಾಲಕ ಇಬ್ಬರೂ ಅಪ್ರಾಪ್ತ ವಯಸ್ಕರಾಗಿದ್ದರಿಂದ ಬಾಲನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ಬೆಂಕಿಯೊಂದಿಗೆ ಆಟ: ಮೇ 12 ರಂದು ಪ್ರೇಮ ನಗರದ ಪಂಚಮುಖಿ ವೃತ್ತದ ಬಳಿ ಬಾಲಕರಿಬ್ಬರು ಆಟವಾಡುತ್ತಿದ್ದರು. ಅದರಲ್ಲಿ ಓರ್ವ 7, ಮತ್ತೊಬ್ಬ 14 ವರ್ಷದವನಿದ್ದ. ಆಟವಾಡುತ್ತ 7 ವರ್ಷದ ಬಾಲಕ 14 ವರ್ಷದವನ ಮೇಲೆ ಡೀಸೆಲ್ ಎರಚಿ ಬೆಂಕಿ ಪೊಟ್ಟಣದಿಂದ ಬೆಂಕಿ ಹಚ್ಚಿಬಿಟ್ಟ. ಬೆಂಕಿಯಿಂದ 14 ವರ್ಷದ ಬಾಲಕ ಬೆಂದು ಒದ್ದಾಡತೊಡಗಿದ. ಕೊನೆಗೆ ಆತ ಜಾನುವಾರುಗಳಿಗೆ ಇಟ್ಟ ಕುಡಿಯುವ ನೀರಿನ ತೊಟ್ಟಿಗೆ ಜಿಗಿದು ಬೆಂಕಿ ಆರಿಸಿಕೊಂಡಿದ್ದ. ಬಾಲಕರ ಕೂಗಾಟ ಕೇಳಿ ಸುತ್ತಮುತ್ತಲಿನವರು ಧಾವಿಸಿ ಹತ್ತಿರದ ಎಂಬಿಎಸ್ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ 14 ವರ್ಷದ ಬಾಲಕ ಜೂನ್ 15 ರಮದು ಮೃತಪಟ್ಟಿದ್ದಾನೆ.

ಡೀಸೆಲ್ ಸಿಕ್ಕಿದ್ದು ಹೀಗೆ: ಪೊಲೀಸರ ಪ್ರಕಾರ, ಆರೋಪಿ 7 ವರ್ಷದ ಬಾಲಕ ಮಧ್ಯ ಪ್ರದೇಶದಿಂದ ಕೋಟಾ ಕ್ಕೆ ಬಂದಿದ್ದ. ಇಲ್ಲಿ ಶಾಲೆಗೆ ಸೇರಿಸಲು ಆತನ ತಂದೆ ಕರೆದುಕೊಂಡು ಬಂದಿದ್ದರು. ಬಾಲಕನ ತಂದೆ ಆಟೋ ಚಾಲಕನಾಗಿದ್ದು, ಮಧ್ಯ ಪ್ರದೇಶದ ಶ್ಯೋಪುರ್ ಮೂಲದವರು. ತಂದೆಯ ಆಟೋದಲ್ಲಿ ಇಟ್ಟಿದ್ದ ಡೀಸೆಲ್ ಬಾಟಲಿಯು ಬಾಲಕನಿಗೆ ಸಿಕ್ಕಿದ್ದು ಅದರಿಂದ ಆಟವಾಡಲು ಹೋಗಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ.

ABOUT THE AUTHOR

...view details