ಕರ್ನಾಟಕ

karnataka

ETV Bharat / bharat

ಆಯುಕ್ತರ ಒಂದೇ ಒಂದು ಮನವಿಗೆ ಸ್ಪಂದನೆ.. ಪ್ಲಾಸ್ಮಾ ದಾನಕ್ಕೆ ಮುಂದೆ ಬಂದ ಪೊಲೀಸರು - ರಾಜ್​ಕೋಟ್​ ಸುದ್ದಿ

ಪೊಲೀಸ್​ ಆಯುಕ್ತರ ಒಂದೇ ಒಂದು ಕರೆಗೆ ಕೋವಿಡ್​ನಿಂದ ಗುಣಮುಖರಾದ ಪೊಲೀಸರು ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿದ್ದಾರೆ. ಈ ಮೂಲಕ ಸೋಂಕಿತರ ಪ್ರಾಣ ಉಳಿಸಲು ರಾಜ್​ಕೋಟ್​ ಪೊಲೀಸರು ಪಣ ತೊಟ್ಟಿದ್ದಾರೆ.

Plasma donation  Plasma donated by policemen  Gujarat cops donate plasma  Gujarat policemen donate plasma  ಪ್ಲಾಸ್ಮ ದಾನ ಮಾಡಲು ಮುಂದೆ ಬಂದ ಪೊಲೀಸರು  ರಾಜ್​ಕೋಟ್​ನಲ್ಲಿ ಪ್ಲಾಸ್ಮ ದಾನ ಮಾಡಲು ಮುಂದೆ ಬಂದ ಪೊಲೀಸರು  ರಾಜ್​ಕೋಟ್​ ಸುದ್ದಿ  ರಾಜ್​ಕೋಟ್​ ಪೊಲೀಸ್​ ಸುದ್ದಿ
ಪ್ಲಾಸ್ಮ ದಾನ ಮಾಡಲು ಮುಂದೆ ಬಂದ ಪೊಲೀಸರು

By

Published : May 1, 2021, 12:19 PM IST

ರಾಜ್​ಕೋಟ್(ಗುಜರಾತ್​)​:ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಅತೀ ವೇಗವಾಗಿ ಹಬ್ಬುತ್ತಿದೆ. ಪೊಲೀಸ್​ ಇಲಾಖೆಯಲ್ಲೂ ಕೊರೊನಾ ಸೋಂಕು ಅತೀವ ಭಯ ಸೃಷ್ಟಿಸುತ್ತಿದೆ. ಹೀಗಾಗಿ ಪೊಲೀಸ್​ ಆಯುಕ್ತರು ಈ ಸಾಂಕ್ರಾಮಿಕ ಕೊರೊನಾ ಚೈನ್​ ಮುರಿಯಲು ಕರೆ ನೀಡಿದ್ದಾರೆ.

371 ಪೊಲೀಸರಿಗೆ ಕೊರೊನಾ..

ಇಲ್ಲಿಯವರೆಗೆ ಡಿಸಿಪಿ, ಪಿಐ, ಪಿಎಸ್ಐ ಸೇರಿದಂತೆ ಒಟ್ಟು 371 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಕೊರೊನಾ ಸೋಂಕಿನಿಂದ ಅನೇಕ ಪೊಲೀಸರು ಸಹ ಚೇತರಿಸಿಕೊಂಡಿದ್ದಾರೆ.

ಪ್ಲಾಸ್ಮಾ ನೀಡುವಂತೆ ಕಮಿಷನರ್​ ಕರೆ..

ಕೊರೊನಾ ವಿರುದ್ಧ ಹೋರಾಡಲು ಮತ್ತು ಕೊರೊನಾ ಸೋಂಕಿತರ ರಕ್ಷಣಗೆ ಸರ್ಕಾರದ ಅನೇಕ ಸಂಘ ಸಂಸ್ಥೆಗಳು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್​ ಸಿಬ್ಬಂದಿ ಪ್ಲಾಸ್ಮಾ ದಾನ ಮಾಡಲು ಮುಂದೆ ಬರುವಂತೆ ಪೊಲೀಸ್​ ಆಯುಕ್ತರು ಕರೆ ನೀಡಿದ್ದಾರೆ.

ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದ ಪೊಲೀಸರು

ಪ್ಲಾಸ್ಮಾ ದಾನ ಮಾಡುವ ಇಚ್ಛೆಯುಳ್ಳವರು ಪಿಎಸ್ಐ ಎಂ.ಎನ್​ ಬೊರಿಸಾಗರ್​ (8980041411) ನಂಬರ್​ಗೆ ಕರೆ ಮಾಡುವಂತೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಪಿಎಸ್​ಐ ಹೇಳಿದ್ದೇನು?

ಈಗಾಗಲೇ ಕೊರೊನಾದಿಂದ ಗುಣಮುಖರಾದ 14 ಪೊಲೀಸರಿಂದ ಪ್ಲಾಸ್ಮಾ ಪಡೆಯಲಾಗಿದೆ. ಪೊಲೀಸರು ಪ್ಲಾಸ್ಮಾ ದಾನ ಮಾಡುವುದನ್ನು ಮುಂದುವರೆಸುತ್ತಿದ್ದಾರೆ. ಆದರೆ ಅವರಲ್ಲಿ ಕೇವಲ ಶೇ.50ರಷ್ಟು ಜನರು ಮಾತ್ರ ತಮ್ಮ ಪ್ಲಾಸ್ಮಾವನ್ನು ದಾನ ಮಾಡಬಹುದಾಗಿದೆ. ಏಕೆಂದರೆ ಅವರ ಆ್ಯಂಟಿಬಾಡಿಸ್ ಹೊಂದಿಕೆಯಾಗುತ್ತಿಲ್ಲ. ಪ್ರತಿದಿನ ಕನಿಷ್ಠ ಆರು ಪೊಲೀಸರು ಸ್ವಯಂಪ್ರೇರಣೆಯಿಂದ ತಮ್ಮ ಪ್ಲಾಸ್ಮಾವನ್ನು ದಾನ ಮಾಡುತ್ತಿದ್ದಾರೆ ಎಂದು ಪಿಎಸ್​ಐ ಹೇಳಿದರು.

ABOUT THE AUTHOR

...view details