ಕರ್ನಾಟಕ

karnataka

ETV Bharat / bharat

ಈ ರಾಶಿಯವರು ಇಂದು ಆರೋಗ್ಯದ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು - 14 March 2021 Etv Bharat horoscope

ಭಾನುವಾರದ ರಾಶಿಫಲ

14 March 2021 Etv Bharat horoscope
ಭಾನುವಾರದ ರಾಶಿಫಲ

By

Published : Mar 14, 2021, 5:00 AM IST

ಮೇಷ

ನಿಮ್ಮ ಕೈಗಳು ಇಂದು ಭರ್ತಿಯಾಗಿವೆ. ಯೋಜನೆ, ಸಭೆಗಳು ಮತ್ತು ಸಾಕಷ್ಟು ಕೆಲಸ ಮಾಡಬೇಕಾಗಿದೆ. ಇತರರ ಮಾತುಗಳಿಂದ ಬೇಸರಗೊಳ್ಳುತ್ತೀರಿ. ಆದರೆ, ನಿಧಾನವಾಗಿ ವಿಷಯಗಳು ಸ್ಪಷ್ಟವಾಗುತ್ತವೆ ಮತ್ತು ಮುಕ್ತಾಯಗೊಳ್ಳುತ್ತವೆ.

ವೃಷಭ

ನಿಮಗೆ ಕೊಟ್ಟ ಜವಾಬ್ದಾರಿಗಳನ್ನು ನಿಭಾಯಿಸಲು ನೀವು ಅಸಾಧಾರಣ ಸಾಮರ್ಥ್ಯ ತೋರುತ್ತೀರಿ. ನೀವು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರೆ ಇತರರಿಗಿಂತ ಮುಂದಿರುತ್ತೀರಿ.

ಮಿಥುನ

ನಿಮ್ಮ ಇಮೇಜ್ ಮತ್ತು ಸಮಾಜದಲ್ಲಿ ಸ್ಥಾನಮಾನದ ಕುರಿತು ತಲೆ ಕೆಡಿಸಿಕೊಳ್ಳಬೇಕೇ ಹೊರತು ಇತರರ ಕಾರ್ಯಗಳ ಕುರಿತು ತಲೆ ಕೆಡಿಸಿಕೊಳ್ಳಬೇಕಿಲ್ಲ. ರೀಟೇಲ್ ವಹಿವಾಟಿನಲ್ಲಿರುವವರು ಇಂದು ಅನಿರೀಕ್ಷಿತ ಲಾಭಗಳನ್ನು ಕಾಣುತ್ತಾರೆ.

ಕರ್ಕಾಟಕ

ನಿಮ್ಮದೇ ಯಶಸ್ಸಿನ ದಾರಿ ಕಂಡುಕೊಳ್ಳುತ್ತೀರಿ. ನೀವು ಜನರಿಂದ ಗೌರವ ಮತ್ತು ಮಾನ್ಯತೆ ಪಡೆಯುತ್ತೀರಿ. ವ್ಯಾಪಾರ ವಿರೋಧಿಗಳು ಮತ್ತು ಕಾಯಿಲೆ ನಿಮ್ಮನ್ನು ಕಂಗೆಡಿಸುತ್ತವೆ. ಶತ್ರುಗಳ ಕಾರ್ಯಗಳ ಬಗ್ಗೆ ಎಚ್ಚರವಾಗಿರಿ. ನಿಮ್ಮ ಸನ್ನದ್ಧತೆ ಅವರ ಯೋಜನೆ ನಾಶ ಮಾಡುತ್ತದೆ.

ಸಿಂಹ

ಕಷ್ಟಪಟ್ಟು ಕೆಲಸ ಮಾಡುವುದು ಅಥವಾ ಕೆಲಸ ಮಾಡಲು ಕಷ್ಟಪಡುವುದು- ಈ ಎರಡರ ನಡುವೆ ಬಹಳ ವ್ಯತ್ಯಾಸವಿದೆ. ನೀವು ಇಂದು ಕಠಿಣವಾಗಿ ಕೆಲಸ ಮಾಡಲು ಅದರಲ್ಲೂ ನೀವು ಬಯಸಿದ ಯಶಸ್ಸು ಪಡೆಯುವಲ್ಲಿ ಜಾಣರಾಗಿರುತ್ತೀರಿ. ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ, ಮತ್ತು ಬಹಳ ಬೇಗನೆ ನೀವು ಇದನ್ನು ಅರಿಯುತ್ತೀರಿ. ಆದ್ದರಿಂದ ಇಂದು ಬೆವರು ಹರಿಸಿ. ಅಲ್ಲದೆ ಕಠಿಣ ಪರಿಶ್ರಮ ಫಲ ನೀಡುತ್ತದೆ.

ಕನ್ಯಾ

ನೀವು ಶಾಂತ ಮತ್ತು ಸ್ಥಿರವಾಗಿರುತ್ತೀರಿ, ಮತ್ತು ನಿಮ್ಮ ಮನಃಶಾಂತಿಗೆ ತೊಂದರೆ ಕೊಡುವುದು ಏನೂ ಇಲ್ಲ. ನಿಮ್ಮ ಕುಟುಂಬ ಮತ್ತು ಮಿತ್ರರು ನಿಮ್ಮನ್ನು ಪೂರ್ಣವಾಗಿ ಬೆಂಬಲಿಸುತ್ತಾರೆ ಮತ್ತು ಅಡೆತಡೆಗಳನ್ನು ಮೀರಲು ಉತ್ತೇಜಿಸುತ್ತಾರೆ. ನೀವು ಭಕ್ತಿಯಿಂದ ಕೆಲಸ ಮಾಡುತ್ತೀರಿ. ಇತರರಿಗೆ ಮಾಡಲು ಕಷ್ಟವಾದ ಕೆಲಸವನ್ನೂ ನೀವು ಮಾಡಲಿದ್ದೀರಿ.

ತುಲಾ

ಭವಿಷ್ಯದ ಅವಕಾಶಗಳನ್ನು ಪಡೆಯಲು, ನೀವು ಹಳೆಯ ಅನುಭವವನ್ನು ಆಶ್ರಯಿಸಬೇಕು. ನಿಮಗೆ ಹತ್ತಿರವಿರುವ ವಸ್ತುಗಳ ಕುರಿತು ನೀವು ಪೊಸೆಸಿವ್ ಆಗುತ್ತೀರಿ. ನಿಮ್ಮ ಸಮಗ್ರತೆ ಪ್ರಶ್ನಿಸುವ ಅಹಿತಕರ ಸನ್ನಿವೇಶಗಳನ್ನು ಎದುರಿಸಲೂಬೇಕು. ಕೆಲ ಸಣ್ಣ ಸಮಸ್ಯೆಗಳು ಹೊರತಾಗಿ ನಿಮ್ಮ ದಿನ ಒಳ್ಳೆಯದಾಗಿದೆ.

ವೃಶ್ಚಿಕ

ಇಂದು ನಿಮಗೆ ಆರೋಗ್ಯದ ಸಲಹೆಗಳನ್ನು ನೀಡುವ ದಿನ. ಆರೋಗ್ಯಕರ ತಿನ್ನುವ ಅಭ್ಯಾಸಗಳು ಮತ್ತು ನಿಯಮಿತ ವ್ಯಾಯಾಮ ನಿಮ್ಮನ್ನು ಬೊಜ್ಜಿನಂತಹ ಸಮಸ್ಯೆಗಳಿಂದ ದೂರವಿಡುತ್ತದೆ. ಅನಿಯಮಿತ ತಿನ್ನುವ ಅಭ್ಯಾಸಗಳು ಮತ್ತು ಅನಾರೋಗ್ಯಕರ ಜೀವನಶೈಲಿ ನಿಮಗೆ ಹಲವು ಸಮಸ್ಯೆಗಳನ್ನು ತರುತ್ತದೆ. ಆರೋಗ್ಯಕರವಾಗಿ ತಿನ್ನಿರಿ, ಸಂತೋಷವಾಗಿರಿ.

ಧನು

ಇಂದು ಕೆಲಸದಲ್ಲಿ ಜವಾಬ್ದಾರಿಗಳನ್ನು ಹೊಂದಿದ್ದೀರಿ. ಆದರೆ ನೀವು ಸವಾಲುಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೀರಿ. ವೈಯಕ್ತಿಕವಾಗಿ, ನಿಮ್ಮ ಮಿತ್ರರ ಪಟ್ಟಿ ಉದ್ದವಾಗುವ ಸಾಧ್ಯತೆ ಇದೆ. ಒಟ್ಟಾರೆ, ನೀವು ಸಕ್ರಿಯ ಅವತಾರದಲ್ಲಿರುತ್ತೀರಿ.

ಮಕರ

ಇಂದು ನೀವು ವಿಶ್ರಾಂತಿ ಪಡೆಯುತ್ತಾ ಹಳೆಯ ನೆನಪುಗಳಲ್ಲಿ ಜಾರಿಕೊಳ್ಳಲಿದ್ದೀರಿ. ನಿಮ್ಮಿಂದ ದೂರವಾದವರ ಬಗ್ಗೆ ಯೋಚಿಸುತ್ತಾ ಮತ್ತೆ ಅವರೊಂದಿಗೆ ಕಾಲ ಕಳೆಯಲು ಬಯಸುವಿರಿ.

ಕುಂಭ

ನಿಮ್ಮ ಭಾವನೆಗಳು ನಿಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ಹಾಳು ಮಾಡಲು ಬಿಡಬೇಡಿ. ನೀವು ತಾರ್ಕಿಕವಾಗಿ ಇರಬೇಕಾದ ಸಂದರ್ಭದಲ್ಲಿ ಭಾವನಾತ್ಮಕವಾಗಿರುವ ಪ್ರವೃತ್ತಿ ನಿಮ್ಮ ದಾರಿಯಲ್ಲಿ ಅಡ್ಡಿಯಾಗುತ್ತದೆ. ಈ ಅಭ್ಯಾಸ ತಪ್ಪಿಸಲು ಕಲಿಯಿರಿ,ಇಲ್ಲದಿದ್ದರೆ ನೀವು ಭಾರೀ ಬೆಲೆ ತೆರಬೇಕಾದೀತು.

ಮೀನ

ನಿಮ್ಮ ಹೃದಯಕ್ಕೆ ಹತ್ತಿರವಿರುವವರ ಬಗ್ಗೆ ನೀವು ಭಾವನಾತ್ಮಕವಾಗುತ್ತೀರಿ. ನಿಮ್ಮನ್ನು ತಿಳಿದಿರುವ ಜನರು ನಿಮ್ಮ ಗುಣದಿಂದಾಗಿ ನಿಮ್ಮನ್ನು ಇಷ್ಟಪಡುತ್ತಾರೆ. ಆದರೆ, ನೀವು ನಿಮಗೆ ಹತ್ತಿರವಾಗಿರುವವರ ಕುರಿತು ನೀವು ಕಾಳಜಿ ಹೊಂದಬೇಕು, ಏಕೆಂದರೆ ನಿಮ್ಮ ಭಾವನೆಗಳಲ್ಲಿ ಅವರ ಕೆಟ್ಟ ಗುಣಗಳನ್ನು ಕಾಣುವುದಿಲ್ಲ ಅಥವಾ ಅವರ ತಪ್ಪುಗಳನ್ನು ಮನ್ನಿಸುತ್ತೀರಿ.

ABOUT THE AUTHOR

...view details