ಕರ್ನಾಟಕ

karnataka

ETV Bharat / bharat

ಜೂ. 24ರಂದು ನಮೋ ಸರ್ವಪಕ್ಷ ಸಭೆ: ವಿವಿಧ ಪಕ್ಷದ 14 ಮುಖಂಡರಿಗೆ ಆಹ್ವಾನ - ವಿವಿಧ ಪಕ್ಷದ 14 ಮುಖಂಡರಿಗೆ ಆಹ್ವಾನ

ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿನ ಸ್ಥಿತಿ-ಗತಿ ಕುರಿತು ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಸಲ ಸರ್ವಪಕ್ಷ ಸಭೆ ಕರೆದಿದ್ದು, ವಿವಿಧ ಪಕ್ಷದ ಮುಖಂಡರಿಗೆ ಆಹ್ವಾನ ನೀಡಲಾಗಿದೆ.

PM Modi
PM Modi

By

Published : Jun 19, 2021, 10:43 PM IST

ಶ್ರೀನಗರ:ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನ ಮಾನ ರದ್ದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಹತ್ವದ ಚರ್ಚೆ ನಡೆಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಜೂನ್. 24ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಭಾಗಿಯಾಗಲು ವಿವಿಧ ಪಕ್ಷಗಳ 14 ಮುಖಂಡರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಜಮ್ಮು-ಕಾಶ್ಮೀರಕ್ಕೆ ಈ ಹಿಂದೆ ನೀಡಲಾಗಿದ್ದ ಆರ್ಟಿಕಲ್​ 370ಯನ್ನ 2019ರ ಆಗಸ್ಟ್​ನಲ್ಲಿ ರದ್ಧುಗೊಳಿಸಲಾಗಿದೆ. ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಿರುವ ಮೊದಲ ಸಭೆ ಇದ್ದಾಗಿದ್ದು, ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ನ್ಯಾಷನಲ್​ ಕಾನ್ಪರೆನ್ಸ್​​(ಎನ್​ಸಿ) ಪಕ್ಷದ ಮುಖಂಡ ಓಮರ್​​ ಅಬ್ದುಲ್ಲಾ, ಪಿಡಿಪಿ ಪಕ್ಷದ ಮೆಹಬೂಬಾ ಮುಫ್ತಿ ಅವರಿಗೆ ಆಹ್ವಾನ ನೀಡಲಾಗಿದೆ. ಉಳಿದಂತೆ ವಿವಿಧ ಪಕ್ಷದ ಮುಖಂಡರಿಗೂ ಸಭೆಯಲ್ಲಿ ಭಾಗಿಯಾಗಲು ಆಹ್ವಾನ ನೀಡಲಾಗಿದ್ದು, ಯಾರೆಲ್ಲ ಭಾಗಿಯಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿರಿ: ಜೂ. 24ರಂದು ಜಮ್ಮು-ಕಾಶ್ಮೀರದ ಸರ್ವಪಕ್ಷ ಸಭೆ ಕರೆದ ಪ್ರಧಾನಿ ಮೋದಿ

ಕೇಂದ್ರಾಡಳಿತ ಪ್ರದೇಶದಲ್ಲಿನ ಸದ್ಯದ ಪರಿಸ್ಥಿತಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಈಗಾಗಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಭದ್ರತಾ ಮತ್ತು ಗುಪ್ತಚರ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ABOUT THE AUTHOR

...view details