ನವದೆಹಲಿ:ಕೋವಿಡ್ -19 ಲಸಿಕೆಯ 136 ಕೋಟಿಗೂ ಹೆಚ್ಚು ಡೋಸ್ಗಳು ಈ ವರ್ಷದ ಅಂತ್ಯದವರೆಗೆ ಲಭ್ಯವಿರುತ್ತದೆ. ಮುಂದಿನ ನಾಲ್ಕು ತಿಂಗಳುಗಳ ಕಾಲ, ಭಾರತದ ಲಸಿಕೆ ಕಾರ್ಯಕ್ರಮವನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ)ದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆಗಳ ಮೂಲಕ ವೇಗಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆಗಸ್ಟ್‌ನಲ್ಲಿ ಕೋವಾಕ್ಸಿನ್‌ನ 2.65 ಕೋಟಿ ಹಾಗೂ ಕೋವಿಶೀಲ್ಡ್ನ 23 ಕೋಟಿ ಡೋಸ್ ಸೇರಿ ಒಟ್ಟು 25.65 ಕೋಟಿ ಡೋಸ್‌ಗಳನ್ನು ಉತ್ಪಾದಿಸಲಾಗುತ್ತದೆ.
ಸೆಪ್ಟೆಂಬರ್‌ನಲ್ಲಿ ಕೋವಾಕ್ಸಿನ್‌ನ 3.15 ಕೋಟಿ ಮತ್ತು ಕೋವಿಶೀಲ್ಡ್ನ 23 ಕೋಟಿ ಡೋಸ್, ಅಕ್ಟೋಬರ್‌ನಲ್ಲಿ ಒಟ್ಟು 28.25 ಕೋಟಿ ಡೋಸ್, ನವೆಂಬರ್‌ನಲ್ಲಿ 28.25 ಕೋಟಿ ಡೋಸ್, ಡಿಸೆಂಬರ್‌ನಲ್ಲಿ 28.5 ಕೋಟಿ ಡೋಸ್ ಸೇರಿ ಒಟ್ಟಾರೆ, ಈ ವರ್ಷದ ಅಂತ್ಯದೊಳಗೆ ಕೊರೊನಾ ಲಸಿಕೆಯ 136 ಕೋಟಿಗೂ ಹೆಚ್ಚು ಡೋಸ್‌ಗಳನ್ನು ಉತ್ಪಾದಿಸುವುದಾಗಿ ಅಂದಾಜಿಸಲಾಗಿದೆ.