ವಿಶಾಖಪಟ್ಟಣಂ( ಆಂಧ್ರಪ್ರದೇಶ): ಹಿಂದೂ ದೇವಾಲಯಗಳಲ್ಲಿ ವಿಗ್ರಹಗಳ ಮೇಲೆ ಚಿನ್ನದ ಆಭರಣಗಳನ್ನು ಹಾಕುವುದು ಹೊಸದಲ್ಲ. ಆದರೆ, ನೋಟುಗಳನ್ನು ಗೋಡೆಗಳ ಮೇಲೆ ಮತ್ತು ನೆಲದ ಮೇಲೆ ಅಂಟಿಸುವುದಿಲ್ಲ. ಅಂತಹ ವಾಡಿಕೆ ಕೂಡಾ ಕಡಿಮೆಯೇ. ಆದರೆ ವಿಶಾಖಪಟ್ಟಣಂನಲ್ಲಿರುವ 135 ವರ್ಷಗಳಷ್ಟು ಹಳೆಯದಾದ ವಾಸವಿ ಕನ್ನಿಕಾ ಪರಮೇಶ್ವರಿ ದೇವಿ ದೇವಾಲಯಕ್ಕೆ ನೋಟುಗಳ ಅಲಂಕಾರ ಮಾಡಲಾಗಿದೆ.
135 ವರ್ಷಗಳ ಪುರಾತನ ದೇವಾಲಯಕ್ಕೆ 6 ಕೋಟಿ ನೋಟು, ಚಿನ್ನಾಭರಣದಿಂದ ಅಲಂಕಾರ..! ವಿಶಾಖಪಟ್ಟಣಂನಲ್ಲಿ ಪ್ರತಿಷ್ಠಾಪಿಸಲಾದ ದೇವಿಯ ಸಂಪೂರ್ಣ ಆವರಣವನ್ನು ಅಮೂಲ್ಯವಾದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಕರೆನ್ಸಿ ನೋಟುಗಳಿಂದ ಅಲಂಕರಿಸಲಾಗಿದೆ. ಇದಕ್ಕಾಗಿ ರೂ.6 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಹಾಗೂ ಕರೆನ್ಸಿ ನೋಟುಗಳನ್ನು ಬಳಸಲಾಗಿದೆ.
135 ವರ್ಷಗಳ ಪುರಾತನ ದೇವಾಲಯಕ್ಕೆ 6 ಕೋಟಿ ನೋಟು, ಚಿನ್ನಾಭರಣದಿಂದ ಅಲಂಕಾರ..! ಅಲಂಕಾರಕ್ಕೆ 6 ಕೆಜಿ ಚಿನ್ನ, 3 ಕೆಜಿ ಬೆಳ್ಳಿ ಸೇರಿ 3.5 ಕೋಟಿ ರೂ. ಬಳಕೆ ಮಾಡಲಾಗಿದೆ. ಈ ದೇವಾಲಯವನ್ನು ಸುಮಾರು 135 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಸುಮಾರು ಎರಡು ದಶಕಗಳಿಂದ ಸಾಂಪ್ರದಾಯಿಕವಾಗಿ ದೇವಿಯನ್ನು ಚಿನ್ನ ಮತ್ತು ಬೆಳ್ಳಿಯಿಂದ ಅಲಂಕರಿಸಿ ಪೂಜೆ ಮಾಡಿಕೊಂಡು ಬರಲಾಗುತ್ತಿದೆ.
135 ವರ್ಷಗಳ ಪುರಾತನ ದೇವಾಲಯಕ್ಕೆ 6 ಕೋಟಿ ನೋಟು, ಚಿನ್ನಾಭರಣದಿಂದ ಅಲಂಕಾರ..! ಇದು ಸಾರ್ವಜನಿಕರ ಕೊಡುಗೆಯಾಗಿದೆ. ಈ ಹಣ, ಚಿನ್ನಾಭರಣವನ್ನು ಪೂಜೆ ಮುಗಿದ ನಂತರ ಹಿಂತಿರುಗಿಸಲಾಗುತ್ತದೆ. ಇದು ದೇವಸ್ಥಾನದ ಟ್ರಸ್ಟ್‌ಗೆ ಹೋಗುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿಕೊಂಡಿದೆ.
135 ವರ್ಷಗಳ ಪುರಾತನ ದೇವಾಲಯಕ್ಕೆ 6 ಕೋಟಿ ನೋಟು, ಚಿನ್ನಾಭರಣದಿಂದ ಅಲಂಕಾರ..! ಇದನ್ನು ಓದಿ:ಪ್ರಧಾನಿ ಮೋದಿ ಭೇಟಿ: ವರದಿಗಾರರ ನಡತೆ ಪ್ರಮಾಣಪತ್ರ ಕೇಳಿದ ಪೊಲೀಸರು.. ಟೀಕೆ ನಂತರ ಆದೇಶ ವಾಪಸ್