ನವದೆಹಲಿ :ಫೆಬ್ರವರಿ 7ರಂದು ಉತ್ತರಾಖಂಡದ ಚಮೋಲಿಯಲ್ಲಿ ನಡೆದಿದ್ದ ಹಿಮ ನದಿ ದುರಂತದ ಸಾವು-ನೋವುಗಳ ಬಗ್ಗೆ ಈಗಲೂ ವರದಿಯಾಗುತ್ತಿದೆ. ಇನ್ನೂ ಸುಮಾರು 130 ಮಂದಿ ಕಾಣೆಯಾಗಿದ್ದು, ಸುಳಿವಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.
ಲೋಕಸಭೆಯಲ್ಲಿ ಇಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರಾದ ನಿತ್ಯಾನಂದರಾಯ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ದುರಂತಕ್ಕೆ ಸಂಬಂಧಿಸಿದಂತೆ ಪರಿಣಿತರ ಜಂಟಿ ಅಧ್ಯಯನ ತಂಡ ರಚಿಸಿದೆ. ಈ ತಂಡದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಶೈಕ್ಷಣಿಕ ಸಂಸ್ಥೆಗಳ, ವಿವಿಧ ಸಂಘಟನೆಗಳ ಸದಸ್ಯರಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:ಬಣ್ಣ ಹಚ್ಚಲಿ ಬಿಡಿ, ಶೀಘ್ರದಲ್ಲೇ ಅಳಿಸಿಹೋಗಲಿದೆ : ಕಮಲ್ ಹಾಸನ್ ಸಂದರ್ಶನ