ಬೆತುಲ್(ಮಧ್ಯಪ್ರದೇಶ):13 ವರ್ಷದ ಬಾಲಕಿಯೋರ್ವಳ ಮೇಲೆ ಕಾಮುಕ ಅತ್ಯಾಚಾರ ಮಾಡಿ, ತದನಂತರ ಜೀವಂತ ಸಮಾಧಿ ಮಾಡುವ ಉದ್ದೇಶದಿಂದ ಕಲ್ಲುಗಳ ಮಧ್ಯೆ ಹೂತು ಹಾಕಲು ಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಸರ್ನಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, 13 ವರ್ಷದ ಬಾಲಕಿ ಮೇಲೆ ನೆರೆಹೊರೆಯ ವ್ಯಕ್ತಿ ಅತ್ಯಾಚಾರಗೈದಿದ್ದಾನೆ. ತದನಂತರ ಕಲ್ಲುಗಳ ಕೆಳಗೆ ಮಧ್ಯೆ ಹೂತು ಹಾಕಲು ಯತ್ನಿಸಿದ್ದಾನೆ. ಇದರಿಂದ ಆಕೆಯ ಸ್ಥಿತಿ ಗಂಭೀರವಾಗಿದ್ದು, ಮಹಾರಾಷ್ಟ್ರದ ನಾಗ್ಪುರ ವೈದ್ಯಕೀಯ ಕಾಲೇಜ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರ ಮಾಡಲಾಗಿದೆ ಎಂದು ಬೆತುಲ್ ಜಿಲ್ಲಾ ಸಿವಿಲ್ ಸರ್ಜನ್ ಅಶೋಕ್ ಬರಂಗಾ ಮಾಹಿತಿ ನೀಡಿದ್ದಾರೆ.