ಕರ್ನಾಟಕ

karnataka

ETV Bharat / bharat

ನಿತ್ಯವೂ ಕುಡಿದು ಬಂದು ತಾಯಿಗೆ ಥಳಿಸುತ್ತಿದ್ದ ಅಪ್ಪ: ಮಲತಂದೆಯ ಕೊಂದ 13ರ ಬಾಲಕ! - ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ

ಬಾಲಕನ ತಂದೆ ಮೃತಪಟ್ಟ ನಂತರ ಆತನ ತಾಯಿ, ವಿನೋದ್ ಎಂಬಾತ​ನೊಂದಿಗೆ ಎರಡನೇ ಮದುವೆಯಾಗಿದ್ದಳು. ಇತ್ತ, ವಿನೋದ್​ಗೂ ಇದು ಎರಡನೇ ಮದುವೆಯಾಗಿತ್ತು. ಆದರೆ, ಪ್ರತಿ ದಿನವೂ ವಿನೋದ್​ ಕುಡಿದು ಬಂದು ಪತ್ನಿಯನ್ನು ಥಳಿಸುತ್ತಿದ್ದ ಎನ್ನಲಾಗ್ತಿದೆ.

ಮಲತಂದೆಯ ಕೊಲೆಗೈದ 13 ವರ್ಷದ ಬಾಲಕ
ಮಲತಂದೆಯ ಕೊಲೆಗೈದ 13 ವರ್ಷದ ಬಾಲಕ

By

Published : Apr 13, 2022, 2:20 PM IST

ಜನಗಾಮ್​ (ತೆಲಂಗಾಣ): ನಿತ್ಯವೂ ಮದ್ಯ ಸೇವಿಸಿ ತನ್ನ ತಾಯಿಗೆ ಥಳಿಸುತ್ತಿದ್ದ ಮಲತಂದೆಯನ್ನು 13 ವರ್ಷದ ಬಾಲಕನೋರ್ವ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಜನಗಾಮ್​ ಜಿಲ್ಲೆಯಲ್ಲಿ ನಡೆದಿದೆ. ಹನುಮಂಡ್ಲಾ ವಿನೋದ್​ (34) ಕೊಲೆಯಾದ ವ್ಯಕ್ತಿ.

ಹೈದರಾಬಾದ್​ನ ಪರಸಿಗುಟ್ಟಾ ನಿವಾಸಿಯಾಗಿದ್ದ ವಿನೋದ್​ನ ಮೊದಲ ಪತ್ನಿ ತೀರಿಹೋಗಿದ್ದಳು. ಇತ್ತ, ಬಾಲಕನ ತಂದೆ ಸಹ ಮೃತಪಟ್ಟ ನಂತರ ತಾಯಿ ಮಂಜುಳಾ, ವಿನೋದ್​ನೊಂದಿಗೆ ಎರಡನೇ ಮದುವೆಯಾಗಿದ್ದಳು. ನಂತರ ಜನಗಾಮ್​ನ ಅಂಬೇಡ್ಕರ್​ ನಗರದಲ್ಲಿ ಕುಟುಂಬ ಸಮೇತವಾಗಿ ವಾಸವಾಗಿದ್ದರು. ಆದರೆ, ಪ್ರತಿ ದಿನವೂ ವಿನೋದ್​ ಕುಡಿದು ಬಂದು ಮಂಜುಳಾಗೆ ಥಳಿಸುತ್ತಿದ್ದ ಎನ್ನಲಾಗ್ತಿದೆ.

ಇದೇ ಕಾರಣಕ್ಕೆ ಮಂಜುಳಾ ಅಲ್ಲೇ ಸಮೀಪದಲ್ಲಿರುವ ತಾಯಿ ಮನೆಗೆ ಬಂದಿದ್ದಳು. ಆದರೂ, ಮಂಗಳವಾರ ರಾತ್ರಿ 10.30ರ ಸುಮಾರಿಗೆ ಅತ್ತೆಯ ಮನೆಗೆ ಬಂದ ವಿನೋದ್, ಅಲ್ಲಿ ಕೂಡ ಮಂಜುಳಾ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಸ್ಥಳದಲ್ಲೇ ಇದ್ದ 13 ವರ್ಷದ ಮಗನಿಗೆ ತನ್ನ ತಾಯಿಯನ್ನು ಥಳಿಸುವುದನ್ನು ನೋಡಿ ಸಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮಲತಂದೆ ಕಣ್ಣಿಗೆ ಖಾರದ ಪುಡಿ ಎರಚಿದ್ದಾನೆ. ಅಲ್ಲದೇ, ಕೈಗೆ ಸಿಕ್ಕ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ವಿನೋದ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಈ ವಿಷಯದ ಎಸಿಪಿ ಜಿ.ಕೃಷ್ಣ ಮತ್ತು ಹಿರಿಯ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಬೆಳ್ಳಂಬೆಳ್ಳಗೆ ಸದ್ದು ಮಾಡಿದ ಖಾಕಿ ಪಿಸ್ತೂಲ್​: ಬೆಂಗಳೂರಲ್ಲಿ ರೌಡಿಶೀಟರ್ ಕಾಲಿಗೆ ಬುಲೆಟ್ ನುಗ್ಗಿಸಿದ ಪೊಲೀಸ್​

ABOUT THE AUTHOR

...view details