ಹೈದರಾಬಾದ್ (ತೆಲಂಗಾಣ) :ಸಿನಿಮಾ ಟಿಕೆಟ್ ಖರೀದಿಗೆ ತನ್ನ ತಂದೆ 300 ರೂಪಾಯಿ ನೀಡಲಿಲ್ಲ ಎಂಬ ಕಾರಣಕ್ಕಾಗಿ 13 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಜಗ್ತಿಯಾಲ್ನಲ್ಲಿ ಇಂದು ನಡೆದಿದೆ.
ತೆಲಂಗಾಣದ ಜಗ್ತಿಯಾಲ್ನ ನವದೀಪ್ (13) ಎಂಬಾತ ಮೃತ ದುರ್ದೈವಿ. 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ನವದೀಪ್ ಪವರ್ಸ್ಟಾರ್ ಪವನ್ ಕಲ್ಯಾಣ್ರ ಅಭಿಮಾನಿಯಾಗಿದ್ದಾನೆ. ಪವನ್ ಕಲ್ಯಾಣ್ರ ಭೀಮ್ಲಾ ನಾಯಕ್ ಸಿನಿಮಾ ಇದೇ ತಿಂಗಳ 25ರಂದು ತೆರೆ ಕಾಣಲಿದೆ. ಇದಕ್ಕಾಗಿ ಸಿನಿಮಾದ ಟಿಕೆಟ್ಗಳನ್ನು ಪ್ರೀ ಬುಕ್ಕಿಂಗ್ ಮಾಡಲಾಗುತ್ತಿದೆ.
ನವದೀಪ್, ಭೀಮ್ಲಾ ನಾಯಕ್ ಸಿನಿಮಾ ವೀಕ್ಷಿಸಲು ಇಚ್ಚಿಸಿ ತಮ್ಮ ತಂದೆಯ ಬಳಿ 300 ರೂಪಾಯಿ ಹಣ ಕೇಳಿದ್ದಾನೆ. ಹಣ ಸದ್ಯಕ್ಕೆ ಕೊಡಲಾಗಲ್ಲ ಎಂದು ನವದೀಪ್ ತಂದೆ ಹೇಳಿದ್ದಾರೆ.