ಕರ್ನಾಟಕ

karnataka

ETV Bharat / bharat

ಮಗುವಿಗೆ ಜನ್ಮ ನೀಡಿದ 13 ವರ್ಷದ ಅತ್ಯಾಚಾರ ಸಂತ್ರಸ್ತೆ: ಕೂಸು ನಿರಾಕರಿಸಿದ ಸಂತ್ರಸ್ತೆ ತಂದೆ - ಈಟಿವಿ ಭಾರತ ಕನ್ನಡ

13 ವರ್ಷದ ಅತ್ಯಾಚಾರ ಸಂತ್ರಸ್ತೆ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಉತ್ತರಪ್ರದೇಶದ ಕೌಶಾಂಬಿಯಲ್ಲಿ ನಡೆದಿದೆ.

13-year-old rape victim delivers baby, girl's father refuses to accept child
ಮಗುವಿಗೆ ಜನ್ಮ ನೀಡಿದ 13 ವರ್ಷದ ಅತ್ಯಾಚಾರ ಸಂತ್ರಸ್ತೆ: ಮಗುವನ್ನು ನಿರಾಕರಿಸಿದ ಸಂತ್ರಸ್ತೆಯ ತಂದೆ

By

Published : Dec 14, 2022, 4:31 PM IST

ಕೌಶಾಂಬಿ (ಉತ್ತರಪ್ರದೇಶ): 13 ವರ್ಷದ ಅತ್ಯಾಚಾರ ಸಂತ್ರಸ್ತೆ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಉತ್ತರಪ್ರದೇಶದ ಕೌಶಾಂಬಿಯಲ್ಲಿ ನಡೆದಿದೆ. ಆದರೆ, ಸಂತ್ರಸ್ತೆಯ ತಂದೆ ನವಜಾತ ಶಿಶುವನ್ನು ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಸಂತ್ರಸ್ತೆಯ ತಂದೆ, ಮಗು ಅಕ್ರಮವಾಗಿದ್ದರಿಂದ ನಮಗೆ ಬೇಡ. ಮಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಿ ಆಕೆಯನ್ನು ಶಿಕ್ಷಿತಳನ್ನಾಗಿ ಮಾಡಬೇಕು. ಈ ಮಗು ಆಕೆಯ ಬದುಕಿಗೆ ಅಡ್ಡಿಯಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೇ ಸಂತ್ರಸ್ತೆಯ ತಂದೆ ಈ ಹಿಂದೆ ಮಗಳ ಗರ್ಭಪಾತಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಬಗ್ಗೆ ಅ.15 ರಂದು, ಗರ್ಭಪಾತ ನಡೆಸಲು ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ಮುಖ್ಯ ವೈದ್ಯಾಧಿಕಾರಿಗೆ ನ್ಯಾಯಾಲಯವು ಆದೇಶಿಸಿತ್ತು. ಬಳಿಕ ನ.12 ರಂದು, ಸಂತ್ರಸ್ತೆಯನ್ನು ಮೇಲ್ವಿಚಾರಣೆ ನಡೆಸಿ ಗರ್ಭಪಾತ ಮಾಡುವ ಮತ್ತು ಬಿಡುವ ಬಗ್ಗೆ ವೈದ್ಯರ ತಂಡ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಇದೀಗ ಸಂತ್ರಸ್ತೆ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಮುಂಬೈನಲ್ಲಿ ಕಾಮುಕನ ಅಟ್ಟಹಾಸ: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ABOUT THE AUTHOR

...view details