ಹೈದರಾಬಾದ್:ಜೂನ್ 2ಕ್ಕೆ ತೆಲಂಗಾಣ, ಆಂಧ್ರ ಪ್ರದೇಶದಿಂದ ಬೇರ್ಪಟ್ಟು ಸ್ವತಂತ್ರ ರಾಜ್ಯವಾಗಿ ಇಂದಿಗೆ 7 ವರ್ಷ ತುಂಬಿದೆ. ಈ ಸಂಭ್ರಮವನ್ನು ತೆಲಂಗಾಣದ ಬಾಲಕಿಯೊಬ್ಬಳು ಗಿನ್ನೆಸ್ ದಾಖಲೆ ಬ್ರೇಕ್ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದ್ದಾಳೆ.
ಮೇ 31 ರಂದು ಹೈದರಾಬಾದ್ನಲ್ಲಿ 13 ವರ್ಷದ ಗನ ಸಂತೋಷಿನಿ ರೆಡ್ಡಿ ಎಂಬ ಕರಾಟೆಪಟು ಕೇವಲ 84 ಸೆಕೆಂಡ್ಗಳಲ್ಲಿ 84 ಸಿರಾಮಿಕ್ ಟೈಲ್ಸ್ ಹೊಡೆಯುವ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾಳೆ. ತೆಲಂಗಾಣ ರಚನೆಯಾಗಿ ಇಂದಿಗೆ 84 ತಿಂಗಳು ಪೂರ್ಣಗೊಂಡಿದ್ದ ನೆನಪಿಗಾಗಿ ಈ ಸಾಧನೆ ಮಾಡಿದ್ದಾರೆ.