ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಪುನರ್‌ರಚನೆಯಾಗುತ್ತಿದ್ದು, ನಮೋ ಕ್ಯಾಬಿನೆಟ್ನಲ್ಲಿ ಜ್ಞಾನಿಗಳಿಗೆ ಮಣೆ ಹಾಕಲಾಗುತ್ತಿದೆ. ಹೊಸದಾಗಿ ಸಂಪುಟ ಸೇರಿಕೊಳ್ಳುತ್ತಿರುವವರಲ್ಲಿ ಬಹುತೇಕರು ಉನ್ನತ ಶಿಕ್ಷಣ ಮುಗಿಸಿದವರು ಅನ್ನೋದು ಇಲ್ಲಿ ವಿಶೇಷ ಸಂಗತಿ.
ಸಂಜೆ 6 ಗಂಟೆಗೆ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ಮೋದಿ ನೂತನ ಕೇಂದ್ರ ಕ್ಯಾಬಿನೆಟ್ನಲ್ಲಿ 13 ವಕೀಲರು, 6 ಮಂದಿ ವೈದ್ಯರು, 5 ಇಂಜಿನಿಯರ್‌ಗಳು, 7 ಮಂದಿ ನಾಗರಿಕ ಸೇವೆಯಲ್ಲಿದ್ದವರು, 4 ಮಾಜಿ ಮುಖ್ಯಮಂತ್ರಿಗಳು, 18 ಮಂದಿ ಮಾಜಿ ಮಂತ್ರಿಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದ್ದು, 14 ನೂತನ ಸಚಿವರ ವಯಸ್ಸು 50ಕ್ಕಿಂತಲೂ ಕಡಿಮೆ ಇದೆ.