ಕರ್ನಾಟಕ

karnataka

ETV Bharat / bharat

ದೇಶದ ವಿವಿಧೆಡೆ ಮೂರು ಪ್ರತ್ಯೇಕ ರಸ್ತೆ ಅಪಘಾತ: 13 ಜನರ ದುರ್ಮರಣ - ಉತ್ತರ ಪ್ರದೇಶದಲ್ಲಿ ಇಬ್ಬರ ಸಾವು

ಹರಿಯಾಣ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣಗಳಲ್ಲಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ.

three separate road accident
ಮೂರು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣ

By

Published : May 17, 2022, 1:20 PM IST

ನವದೆಹಲಿ: ದೇಶದಲ್ಲಿ ವರದಿಯಾದ ಮೂರು ರಸ್ತೆ ಅಪಘಾತ ಪ್ರಕರಣಗಳಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿ 13 ಜನರು ಸಾವನ್ನಪ್ಪಿದ್ದಾರೆ. ಇತರೆ ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ-1: ಹರಿಯಾಣದ ರೇವಾರಿ ಜಿಲ್ಲೆಯಲ್ಲಿ ನಡೆದ ಕ್ರೂಸರ್​ ಮತ್ತು ಟ್ರಕ್​ ಮಧ್ಯೆ ನಡೆದ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿ ಐದು ಮಂದಿ ಮೃತಪಟ್ಟಿದ್ದಾರೆ. ಮೃತರನ್ನು ಭಾನುರಾಮ್​ (35), ಮಹೇಂದ್ರ (33), ಆಶೀಶ್​ (15), ಸುಗ್ಮಾ ದೇವಿ (35) ಮತ್ತು ಭೋರಿ ದೇವಿ (95) ಎಂದು ಗುರುತಿಸಲಾಗಿದೆ.

ರಾಜಸ್ಥಾನದ ಜೈಪುರ ಜಿಲ್ಲೆಯ ಸಮೋದ್​ ಗ್ರಾಮದ ನಿವಾಸಿಗಳಾದ ಇವರು, ಸೋಮವಾರ ಬೆಳಗ್ಗೆ ಹರಿದ್ವಾರದಲ್ಲಿ ಸಂಬಂಧಿಕರೊಬ್ಬರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಒಟ್ಟು 17 ಜನರು ಒಂದೇ ಕ್ರೂಸರ್​ನಲ್ಲಿ ಹೋಗಿ ಮರಳಿ ತಮ್ಮೂರಿಗೆ ಬರುತ್ತಿದ್ದರು. ಮಂಗಳವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ದೆಹಲಿ-ಜೈಪುರ ಹೆದ್ದಾರಿ ಬರುತ್ತಿದ್ದಾಗ ಲಾರಿಗೆ ಕ್ರೂಸರ್​ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ-2:: ಬಿಹಾರದ ಪಶ್ಚಿಮ ಚಂಪಾರಣ ಜಿಲ್ಲೆಯ ವಾಲ್ಮೀಕಿ ನಗರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮರಕ್ಕೆ ಕಾರು ಗುದ್ದಿದ್ದು, ಒಂದೇ ಕುಟುಂಬದ ಇಬ್ಬರು ಮಕ್ಕಳು ನಾಲ್ವರು ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ತೆರಳಿ ಮರಳಿ ಬರುತ್ತಿದ್ಧಾಗ ದುರ್ಘಟನೆ ಸಂಭವಿಸಿದೆ.

ಘಟನೆ-3: ಉತ್ತರ ಪ್ರದೇಶದ ಲಖನೌ ಮತ್ತು ಆಗ್ರಾ ಹೆದ್ದಾರಿಯಲ್ಲಿ ಬಸ್​ ಪಲ್ಟಿ ಹೊಡೆದು ಇಬ್ಬರು ಪ್ರಯಾಣಿಕರು ಮೃತಪಟ್ಟರು. ಇತರೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ, ಇತರರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಈ ಬಸ್​ ಬಿಹಾರದಿಂದ ರಾಜಸ್ಥಾನಕ್ಕೆ ಹೊರಟಿತ್ತು. ಇದರಲ್ಲಿ ಸುಮಾರು 50 ಜನ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ವಿಷಯ ತಿಳಿದು ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು.

ಇದನ್ನೂ ಓದಿ:ಬೆಂಗಳೂರಲ್ಲಿ ಫ್ಯಾಟ್ ಸರ್ಜರಿ ವೇಳೆ ನಟಿ ಸಾವು

ABOUT THE AUTHOR

...view details