ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 12,885 ಹೊಸ ಕೋವಿಡ್-19 (COVID-19) ಪ್ರಕರಣಗಳು ದೃಢಪಟ್ಟಿವೆ. ನಿನ್ನೆ 11,903 ಸೋಂಕು ಪ್ರಕರಣಗಳು ವರದಿಯಾಗಿದ್ದವು.
ಸೋಂಕಿನಿಂದ 15,054 ಮಂದಿ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ 98.23% ರಷ್ಟು ಇದೆ. 2020ರ ಮಾರ್ಚ್ನಿಂದ ಈವರೆಗೆ ಗುಣಮುಖರಾದವರ ಪ್ರಮಾಣ ಶೇ. 98.23ರಷ್ಟಾಗಿರುವುದು ಇದೇ ಮೊದಲು. ಈವರೆಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 3,37,12,794ಕ್ಕೆ ತಲುಪಿದೆ. ಹಾಗೆ ನಿನ್ನೆ 461 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ.
ದೇಶಾದ್ಯಂತ ಲಸಿಕಾಕರಣ ನಿರಂತರವಾಗಿ ನಡೆಯುತ್ತಿದೆ. ಈವರೆಗೆ ಒಟ್ಟು 1,07,63,14,440 ಡೋಸ್ ನೀಡಲಾಗಿದೆ.
ಇತರೆ ದೇಶಗಳ ಕೋವಿಡ್ ಅಪ್ಡೇಟ್ಸ್:
- ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳು ದಿನೇ-ದಿನೆ ಹೆಚ್ಚುತ್ತಿವೆ. ಇಂದು ಹೊಸದಾಗಿ 75,639 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದರೆ, 1,436 ಜನರು ಸಾವನ್ನಪ್ಪಿದ್ದಾರೆ.
- ರಷ್ಯಾದಲ್ಲಿ ಇಂದು 40,443 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದರೆ, 1,189 ಜನರು ಮೃತಪಟ್ಟಿದ್ದಾರೆ.
- ಬ್ರಿಟನ್ನಲ್ಲಿ 41,299 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಮತ್ತು 217 ಮಂದಿ ಕೊನೆಯುಸಿರೆಳೆದಿದ್ದಾರೆ.
- ಟರ್ಕಿಯಲ್ಲಿ 29,764 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 246 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
- ಜರ್ಮನಿಯಲ್ಲಿ 26,453 ಪ್ರಕರಣಗಳು ವರದಿಯಾಗಿದ್ದರೆ, 184 ಜನರು ಸಾವನ್ನಪ್ಪಿದ್ದಾರೆ.