ಕರ್ನಾಟಕ

karnataka

ETV Bharat / bharat

124 ವರ್ಷದ ಅಜ್ಜಿಗೆ ಕೊರೊನಾ ಲಸಿಕೆ... ಈ ಅಜ್ಜಿ ಎಲ್ಲಿಯವರು ಅಂತೀರಾ? - ಜಮ್ಮು ಕಾಶ್ಮೀರದ ಮಾಹಿತಿ ಸಚಿವಾಲಯ

ಜಮ್ಮು ಕಾಶ್ಮೀರದಲ್ಲಿ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದ ವೇಳೆ 124 ವರ್ಷದ ಅಜ್ಜಿಯೊಬ್ಬರಿಗೆ ಲಸಿಕೆ ನೀಡಲಾಗಿದೆ. ವಿಶೇಷ ಎಂದರೆ ಈ ಅಜ್ಜಿ ಜಮ್ಮು ಕಾಶ್ಮೀರದ ಬಾರಾಮುಲ್ಲಾದ ವಾಗೂರಾ ಬ್ಲಾಕ್​​​ನ ಶ್ರಾಕ್​ವಾರ ಪ್ರದೇಶದಲ್ಲಿ ವಾಸವಾಗಿದ್ದಾರೆ.

124 ವರ್ಷದ ಅಜ್ಜಿಗೆ ಲಸಿಕೆ
124 ವರ್ಷದ ಅಜ್ಜಿಗೆ ಲಸಿಕೆ

By

Published : Jun 2, 2021, 8:34 PM IST

ಬಾರಾಮುಲ್ಲಾ( ಕಾಶ್ಮೀರ):ಜಮ್ಮು ಕಾಶ್ಮೀರದಲ್ಲಿ ಲಸಿಕಾ ಅಭಿಯಾನ ಭರದಿಂದ ಸಾಗಿದೆ. ಅಚ್ಚರಿ ವಿಷಯ ಎಂದರೆ ಇಲ್ಲಿ 124 ವರ್ಷದ ಅಜ್ಜಿಯೊಬ್ಬರು ಪತ್ತೆಯಾಗಿದ್ದಾರೆ. ಇನ್ನೂ ವಿಶೇಷ ಎಂದರೆ ಈ ಅಜ್ಜಿಗೆ ಇಲ್ಲಿನ ಆರೋಗ್ಯ ಇಲಾಖೆ ಲಸಿಕೆಯನ್ನೂ ಹಾಕಿದೆ.

ಅಂದ ಹಾಗೆ ಈ ಅಜ್ಜಿ ಕಂಡು ಬಂದಿರೋದು ಬಾರಾಮುಲ್ಲಾದ ಶ್ರಾಕ್​ವಾರಾದ ವಾಗೂರಾ ಬ್ಲಾಕ್​​ನ ಮನೆಯೊಂದರಲ್ಲಿ. ಕಾಶ್ಮೀರದ ಆರೋಗ್ಯ ಇಲಾಖೆ ಕೊರೊನಾದಿಂದ ಜನರನ್ನು ಕಾಪಾಡಲು ಮನೆ ಮನೆಗೆ ತೆರಳಿ ಲಸಿಕೆಯನ್ನು ಹಾಕುತ್ತಿದೆ.

ಹೀಗೆ ಮನೆ ಮನೆ ತೆರಳಿದಾಗ ಇಲಾಖೆಗೆ ರೆಹತಿ ಬೇಗಂ ಎಂಬ ದೇಶದ ಹಿರಿಯಜ್ಜಿ ಪತ್ತೆಯಾಗಿದ್ದಾರೆ. ಅಂದ ಹಾಗೆ ರೆಹತಿ ಬೇಗಂ ಅವರ ವಯಸ್ಸು 124 ವರ್ಷ. ಈ ಅಜ್ಜಿಗೆ ಈಗ ಅಲ್ಲಿನ ಆರೋಗ್ಯ ಸಿಬ್ಬಂದಿ ಕೊರೊನಾ ವ್ಯಾಕ್ಸಿನ್​ ಹಾಕಿದ್ದಾರೆ.

ಜಮ್ಮು ಕಾಶ್ಮೀರದ ಮಾಹಿತಿ ಸಚಿವಾಲಯ ದೇಶದ ಹಿರಿಯಜ್ಜಿಗೆ ಲಸಿಕೆ ನೀಡಿರುವುದನ್ನ ಖಚಿತ ಪಡಿಸಿದೆ.

ABOUT THE AUTHOR

...view details