ಕರ್ನಾಟಕ

karnataka

ETV Bharat / bharat

ಅಬ್ಬಬ್ಬಾ! 47 ಸೀಟಿನ ಬಸ್​ನಲ್ಲಿ 124 ಮಂದಿ ಪ್ರಯಾಣ.. ಬಸ್​ ವಶಕ್ಕೆ ಪಡೆದ ಪೊಲೀಸರು - ಉತ್ತರಾಖಂಡ್

47 ಆಸನ ವ್ಯವಸ್ಥೆಯಿರುವ ಬಸ್​ನಲ್ಲಿ 124 ಮಂದಿ ಪ್ರಯಾಣಿಸಿರುವ ಘಟನೆ ಉತ್ತರಾಖಂಡ್​ನಲ್ಲಿ ನಡೆದಿದೆ. ಬಸ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Etv Bharat
Etv Bharat

By ETV Bharat Karnataka Team

Published : Sep 20, 2023, 11:05 PM IST

ಡೆಹ್ರಾಡೂನ್​ (ಉತ್ತರಾಖಂಡ್​) : 47 ಆಸನ ವ್ಯವಸ್ಥೆವುಳ್ಳ ಖಾಸಗಿ ಬಸ್​ನಲ್ಲಿ ನೂರಕ್ಕೂ ಅಧಿಕ ಮಂದಿ ಪ್ರಯಾಣಿಸಿರುವ ಆತಂಕಕಾರಿ ಘಟನೆ ಉತ್ತರಾಖಂಡ್​ನಲ್ಲಿ ನಡೆದಿದೆ. ಒಂದು ರೈಲ್ವೇ ಬೋಗಿಗಿಂತ ಹೆಚ್ಚಿನ ಸಂಖ್ಯೆಯ ಜನರನ್ನು ಬಸ್​ನಲ್ಲಿ ಸಾಗಿಸಿದ್ದಾರೆ. ಇದನ್ನು ನೋಡಿ ಪೊಲೀಸರೇ ಒಂದು ಕ್ಷಣ ದಂಗಾಗಾಗಿದ್ದು, ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.

UP 22 T 9127 ನಂಬರ್​ನ ಖಾಸಗಿ ಬಸ್​ವೊಂದು ಉತ್ತರಪ್ರದೇಶದ ಫಿಲಿಬಿತ್​ನಿಂದ ಉತ್ತರಾಖಂಡ್​ನ ಡೆಹ್ರಾಡೂನ್​ಗೆ ತೆರಳುತ್ತಿತ್ತು. ಈ ಬಸ್​ ಒಟ್ಟು 32 ಸಾಮಾನ್ಯ ಸೀಟ್​ಗಳು ಮತ್ತು 15 ಸ್ಲೀಪರ್​ ಸೀಟ್​ಗಳನ್ನು ಹೊಂದಿದೆ. ಈ ಬಸ್​ನ್ನು ಇಲ್ಲಿನ ಶ್ಯಾಮ್​ಪುರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಸ್​ನ ಒಳಗೆ ಪ್ರವೇಶಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಬಸ್​ನಲ್ಲಿ ಇದ್ದ ಆಸನ ವ್ಯವಸ್ಥೆಗಿಂತ ಮೂರು ಪಟ್ಟು ಹೆಚ್ಚು ಜನರು ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು.

ಈ ವೇಳೆ ಪೊಲೀಸರು ಬಸ್​ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಿದಾಗ ಒಟ್ಟು ಪ್ರಯಾಣಿಕರ ಸಂಖ್ಯೆ ನೂರರ ಗಡಿ ದಾಟಿದೆ. ಬಸ್​ನಲ್ಲಿ ಒಟ್ಟು 124 ಮಂದಿ ಪ್ರಯಾಣಿಸುತ್ತಿದ್ದರು. ಈ ಬಸ್​ ಫಿಲಿಬಿತ್​ನಿಂದ ಹೊರಟು ಡೆಹ್ರಾಡೂನ್​ ತಲುಪುವಾಗ ಹಲವು ಪೊಲೀಸ್​ ಚೆಕ್​ಪೋಸ್ಟ್​ಗಳನ್ನು ದಾಟಿದ್ದರೂ, ಎಲ್ಲಿಯೂ ತಪಾಸಣೆ ನಡೆಸದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಬಳಿಕ ಈ ಬಸ್​ನ್ನು ಶ್ಯಾಮಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸ್​ನಲ್ಲಿದ್ದ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಗಳಿಗೆ ತೆರಳಲು ಬೇರೆ ವಾಹನಗಳ ಮೂಲಕ ಕಳುಹಿಸುವ ಕೆಲಸವನ್ನು ಪೊಲೀಸರು ಮಾಡಿದರು.

185 ಜನರನ್ನು ತುಂಬಿಸಿಕೊಂಡು ಪ್ರಯಾಣ :ಇದಕ್ಕೂ ಮೊದಲೂ ಇಂತಹುದೇ ಘಟನೆ ನಡೆದಿತ್ತು. ಕಳೆದ ಆಗಸ್ಟ್​ 28ರಂದು ಡೆಹ್ರಾಡೂನ್​ನಿಂದ ಲಖೀಂಪುರ ಖೇರಿಗೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಚಾಂಡಿಘಾಟ್​ನಲ್ಲಿ ಪೊಲೀಸರು ತಪಾಸಣೆ ನಡೆಸಿದ್ದರು. 47 ಪ್ರಯಾಣಿಕರ ಸೀಟಿನ ಬಸ್​ನಲ್ಲಿ ಒಟ್ಟು 185 ಪ್ರಯಾಣಿಕರನ್ನು ತುಂಬಲಾಗಿತ್ತು. ಪ್ರತಿ ಟಿಕೆಟ್​ಗೆ 700 ರೂಪಾಯಿ ನಿಗದಿ ಮಾಡಲಾಗಿತ್ತು. ಈ ವೇಳೆ ಬಸ್​ನ್ನು ವಶಕ್ಕೆ ಪಡೆದಿದ್ದರು. ಬಳಿಕ ಪೊಲೀಸ್​ ಅಧಿಕಾರಿಗಳು ಬೇರೆ ಮೂರು ಬಸ್​ಗಳ ನೆರವಿನಿಂದ ಪ್ರಯಾಣಿಕರನ್ನು ಲಖೀಂಪುರ ಖೇರಿಗೆ ಪ್ರಯಾಣಿಸಲು ಅನುವು ಮಾಡಿಕೊಟ್ಟಿದ್ದರು. ಉತ್ತರಾಖಂಡ್​ನಲ್ಲಿ ಅಪಘಾತ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದರಲ್ಲಿ ಬಸ್​ಗಳಲ್ಲಿ ಹೆಚ್ಚು ಜನರನ್ನು ತುಂಬಿಸಿಕೊಂಡು ಹೋಗುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ.

ಇದನ್ನೂ ಓದಿ :ಧಾರವಾಡದಲ್ಲಿ ಅಪರಿಚಿತ ವಾಹನ ಡಿಕ್ಕಿ: ಕಾನ್​ಸ್ಟೇಬಲ್​ ಸಾವು, ಮಹಿಳಾ ಸಿಬ್ಬಂದಿಗೆ ಗಂಭೀರ ಗಾಯ

ABOUT THE AUTHOR

...view details