ಸೀತಾಮರ್ಹಿ (ಬಿಹಾರ): ಬಿಹಾರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ನಾಲ್ಕು ವರ್ಷದ ಬಾಲಕಿಯ ಮೇಲೆ 12 ವರ್ಷದ ಬಾಲಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಸಿತಾಮರ್ಹಿ ಜಿಲ್ಲೆಯಲ್ಲಿ ವರದಿಯಾಗಿದೆ. ಕೆಲ ಅಶ್ಲೀಲ ವಿಡಿಯೋಗಳನ್ನು ನೋಡಿ ಆರೋಪಿ ಬಾಲಕ ಪ್ರಚೋದನೆಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ನಾನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾದ ಸಂತ್ರಸ್ತ ಬಾಲಕಿ ಇತ್ತೀಚೆಗೆ ತನ್ನ ಅಜ್ಜಿಯ ಮನೆಗೆ ಹೋಗಿದ್ದಳು. ಈ ವೇಳೆ, ಹೊರಗೆ ಆಟವಾಡುತ್ತಿದ್ದಾಗ 6ನೇ ತರಗತಿ ಓದುತ್ತಿದ್ದ 12 ವರ್ಷದ ಬಾಲಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ರಕ್ತಸ್ರಾವವಾಗಿ ಮನೆಗೆ ಬಂದ ಬಾಲಕಿ ಕುಟುಂಬಸ್ಥರಿಗೆ ತನ್ನ ನೋವನ್ನು ಹೇಳಿಕೊಂಡಾಗ ಈ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:ಸೈಬರ್ ಕಳ್ಳರಿದ್ದಾರೆ ಹುಷಾರ್.. ಇನ್ಸ್ಟಾಗ್ರಾಂ ಸ್ನೇಹಿತನಿಂದ 1 ಲಕ್ಷ ರೂ ವಂಚನೆ.. ಒಂದೇ ಗಂಟೆಯಲ್ಲಿ ಹಣ ವಾಪಸ್!
ಈ ವಿಷಯ ತಿಳಿದ ತಕ್ಷಣವೇ ಕುಟುಂಬಸ್ಥರು ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಇದಾದ ನಂತರ ಸಂತ್ರಸ್ತೆಯ ಅಜ್ಜಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿ ತನಿಖೆ ಆರಂಭಿಸಿ ಈಗಾಗಲೇ ಆರೋಪಿ ಬಾಲಕಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಆರೋಪಿಯನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.