ಚಿಂದ್ವಾರಾ(ಮಧ್ಯಪ್ರದೇಶ):ಅದೆಷ್ಟೋ ಗೇಮ್ಗಳು ಮಕ್ಕಳ ಪ್ರಾಣವನ್ನೇ ಬಲಿ ಪಡೆದಿವೆ. ಆದರೆ, ಇಲ್ಲೊಬ್ಬ 12 ವರ್ಷದ ಬಾಲಕ ತನ್ನ ಅಕ್ಕ ಆಟವಾಡಲು (ಗೇಮ್) ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಪರಾಸಿಯಾದ ಕೊಹ್ಕಾ ದಮುವಾ ಎಂಬ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ರುಕ್ಮನ್ಶಾ(12) ಮೃತ ದುರ್ದೈವಿ ಬಾಲಕ. ರುಕ್ಮನ್ಶಾ ಮತ್ತು ತನ್ನ ಅಕ್ಕ ಇಬ್ಬರು ಸೇರಿಕೊಂಡು ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದರು. ಈ ವೇಳೆ, ತನಗೆ ಮೊಬೈಲ್ ಕೊಡಲು ರುಕ್ಮನ್ ಶಾ ಕೇಳಿಕೊಂಡಿದ್ದಾನೆ. ಈ ವೇಳೆ, ಅವನ ಅಕ್ಕ ಮೊಬೈಲ್ ಕೊಡಲು ನಿರಾಕರಿಸಿದ್ದಾರೆ. ಕೋಪಗೊಂಡ ರುಕ್ಮನ್ ಶಾ ಕೋಣೆಯೊಂದರಲ್ಲಿ ಹೋಗಿ ನೇಣು ಬಿಗಿದುಕೊಂಡಿದ್ದಾನೆ.