ಕರ್ನಾಟಕ

karnataka

ETV Bharat / bharat

ಭಾರತ ಪ್ರವೇಶಿಸಿದ್ದ 6 ಮೀನುಗಾರರು ಸೇರಿ 12 ಮಂದಿ ಕೈದಿಗಳು ಪಾಕಿಸ್ತಾನಕ್ಕೆ ವಾಪಸ್ - ಅಟ್ಟಾರಿ ವಾಘಾ ಗಡಿ

ಕಳೆದ ತಿಂಗಳು ಪಾಕಿಸ್ತಾನವು 20 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿ ವಾಘಾ ಗಡಿಯ ಮೂಲಕ ದೇಶಕ್ಕೆ ವಾಪಸ್ ಕಳುಹಿಸಿತ್ತು. ಇದೀಗ ಭಾರತ, ಆರು ಮೀನುಗಾರರು ಸೇರಿದಂತೆ 12 ಪಾಕಿಸ್ತಾನಿ ಕೈದಿಗಳನ್ನು ಅಟ್ಟಾರಿ-ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ವಾಪಸ್​ ಕಳುಹಿಸಿದೆ.

12 ಮಂದಿ ಕೈದಿಗಳು ಪಾಕಿಸ್ತಾನಕ್ಕೆ ವಾಪಸ್
12 ಮಂದಿ ಕೈದಿಗಳು ಪಾಕಿಸ್ತಾನಕ್ಕೆ ವಾಪಸ್

By

Published : Feb 18, 2022, 8:33 AM IST

ಅಮೃತಸರ(ಪಂಜಾಬ್): ಭಾರತ ಪ್ರವೇಶಿಸಿದ್ದ ಆರು ಮೀನುಗಾರರು ಸೇರಿದಂತೆ 12 ಪಾಕಿಸ್ತಾನಿ ಕೈದಿಗಳನ್ನು ಗುರುವಾರ ಅಟ್ಟಾರಿ-ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ವಾಪಸ್​ ಕಳುಹಿಸಲಾಗಿದೆ. ಈ ಕುರಿತು ಪ್ರೋಟೋಕಾಲ್ ಅಧಿಕಾರಿ ಅರುಣ್​ಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ.

'ಈ ಮೀನುಗಾರರು ತಪ್ಪಾಗಿ ಭಾರತಕ್ಕೆ ಪ್ರವೇಶಿಸಿ ಜೈಲುವಾಸವನ್ನು ಪೂರ್ಣಗೊಳಿಸಿದ್ದಾರೆ. ಶಿಕ್ಷೆ ಪೂರ್ಣಗೊಳಿಸಿದ ಹನ್ನೆರಡು ಪಾಕಿಸ್ತಾನಿ ಕೈದಿಗಳನ್ನು ಅಟ್ಟಾರಿ-ವಾಘಾ ಭೂ ಗಡಿಯ ಮೂಲಕ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗಿದೆ' ಎಂದು ಅವರು ತಿಳಿಸಿದರು.

ಕಳೆದ ತಿಂಗಳು ಪಾಕಿಸ್ತಾನವು 20 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿ ವಾಘಾ ಗಡಿಯ ಮೂಲಕ ಭಾರತಕ್ಕೆ ವಾಪಸ್ ಕಳುಹಿಸಿತ್ತು. ನಾಲ್ಕು ವರ್ಷಗಳ ಕಾಲ ಮೀನುಗಾರರನ್ನು ಕರಾಚಿಯ ಲಾಂಧಿ ಜೈಲಿನಲ್ಲಿ ಇರಿಸಲಾಗಿತ್ತು ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details