ನಾಸಿಕ್( ಮಹಾರಾಷ್ಟ್ರ): ಎಂಎನ್ಎಸ್ ನಗರಾಧಿಕಾರಿ ಹಾಗೂ ಸಂಯೋಜಕರು ಸೇರಿದಂತೆ ಅನೇಕ ಮಂದಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನಾಯಕತ್ವದ ಬಾಳಸಾಹೇಬ್ ಶಿವಸೇನೆಗೆ ಸೇರ್ಪಡೆಗೊಂಡಿದ್ದಾರೆ. ಎಂಎನ್ಎಸ್ ನಗರ ಸಂಯೋಜಕ ಸಚಿನ್ ಬೋಸ್ಲೆ ಸೇರಿದಂತೆ ಹಲವು ಮಂದಿ ಗುರುವಾರ ತಡರಾತ್ರಿ ಶಿಂಧೆ ಬಣ್ಣಕ್ಕೆ ಸೇರಿದ್ದಾರೆ.
ಶಿಂಥೆ ಬಣ ಸೇರಿದ ಠಾಕ್ರೆ ಗುಂಪಿನ ಸದಸ್ಯರು ಚಂದ್ರಕಾಂತ ಖೋಡೆ, ಸೂರ್ಯಕಾಂತ್ ಲವಟೆ, ಪುನಂ ಮೊಗ್ರೆ, ಆರ್.ಡಿ.ಧೋಂಗ್ಡೆ, ಜ್ಯೋತಿ ಖೋಲೆ, ಸುದಂ ಧೇಮ್ಸೆ, ಜಯಶ್ರೀ ಖರ್ಜುಲ್, ಸುವರ್ಣ ಮಾತಾಳೆ, ಡಿ.ಜಿ.ಸೂರ್ಯವಂಶಿ, ಶ್ಯಾಮ್ ಕುಮಾರ್ ಸಾಬಳೆ ಹಾಗೂ ಬಿಜೆಪಿ ನಗರ ಪದಾಧಿಕಾರಿ ಪ್ರತಾಪ್ ಮೆಹ್ರೋಲಿಯಾ ಕೂಡ ಇದೇ ವೇಳೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಇವರ ಜೊತೆ ಮಾಜಿ ಕಾರ್ಪೊರೇಟರ್‌ಗಳು ಪಕ್ಷ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. ಮೊದಲ ಹಂತದಲ್ಲಿ 5 ಮತ್ತು ಮತ್ತೆ 11 ಕಾರ್ಪೊರೇಟರ್‌ಗಳು ಬರಲಿದ್ದು, ಇದರಲ್ಲಿ ಸಿಡ್ಕೊದಿಂದ 5, ನಾಸಿಕ್ ರಸ್ತೆಯಿಂದ 5 ಮತ್ತು ಸಾತ್ಪುರ ಮತ್ತು ಪಶ್ಚಿಮ ಮತ್ತು ಪಂಚವಟಿಯಿಂದ ತಲಾ 1 ಮಾಜಿ ಕಾರ್ಪೊರೇಟರ್‌ಗಳು ಶಿಂದೆ ಬಣ ಸೇರುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಏಕನಾಥ ಶಿಂಧೆಯವರ ಪಕ್ಷದ ಮೂಲಕ ನಾಸಿಕ್ ಅಭಿವೃದ್ಧಿ ಪಡಿಸಲಾಗುವುದು. ಶೀಘ್ರದಲ್ಲೇ ಉದ್ಧವ್ ಸೇನೆಯ ಇತರ ಅತೃಪ್ತ ಕಾರ್ಪೊರೇಟರ್‌ಗಳು ಬಾಳಾಸಾಹೇಬ್ ಅವರ ಶಿವಸೇನೆಗೆ ಸೇರಲಿದ್ದಾರೆ ಎಂದು ಸಂಸದ ಹೇಮಂತ್ ಗೋಡ್ಸೆ ಇದೇ ವೇಳೆ ಹೇಳಿದ್ದಾರೆ.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆಗೆ 100 ದಿನ.. ಚುನಾವಣೆ ಗೇಮ್ ಚೇಂಜರ್ ಆಗಲಿದೆಯಾ ರಾಹುಲ್ ಪಾದಯಾತ್ರೆ!?