ಕರ್ನಾಟಕ

karnataka

ETV Bharat / bharat

ವಿದೇಶದಿಂದ ಬಂದ 12 ಜನರಲ್ಲಿ ಕೊರೊನಾ.. ಒಮಿಕ್ರಾನ್​​ ಪರೀಕ್ಷೆಗೆ ಸ್ಯಾಂಪಲ್ಸ್​​ ರವಾನಿಸಿದ ತೆಲಂಗಾಣ - telangana omicron

ಕಳೆದ ಮೂರು ದಿನದಲ್ಲಿ ವಿದೇಶದಿಂದ ಹೈದರಾಬಾದ್​​ ಏರ್​ಪೋರ್ಟ್​​ಗೆ ಆಗಮಿಸಿದ್ದ 12 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

12 corona cases in Hyderabad
12 corona cases in Hyderabad

By

Published : Dec 3, 2021, 8:39 PM IST

ಹೈದರಾಬಾದ್​​(ತೆಲಂಗಾಣ):ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಒಮಿಕ್ರಾನ್​​ ರೂಪಾಂತರ ಭಯದಲ್ಲೇ ಇದೀಗ ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿತ ಪ್ರಕರಣಗಳಲ್ಲೂ ಏರಿಕೆ ಕಂಡು ಬರುತ್ತಿದೆ. ವಿದೇಶದಿಂದ ಹೈದರಾಬಾದ್​​ಗೆ ಬಂದಿರುವ 12 ಪ್ರವಾಸಿಗರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ವಿದೇಶದಿಂದ ಬಂದಿರುವ ಎಲ್ಲ 12 ಮಂದಿಯಲ್ಲೂ ಸೋಂಕು ಕಾಣಿಸಿಕೊಂಡಿರುವ ಕಾರಣ ಇದೀಗ ಸ್ವ್ಯಾಬ್​​​​​ ಸಂಗ್ರಹಿಸಿ ಜೀನೋಮ್ ಸೀಕ್ವೆನ್ಸಿಂಗ್ ಸ್ಯಾಂಪಲ್ಸ್​​ಗೆ ರವಾನೆ ಮಾಡಲಾಗಿದೆ. ಕೋವಿಡ್ ಕಾಣಿಸಿಕೊಂಡಿರುವವರ ಪೈಕಿ 9 ಜನರು ಲಂಡನ್​​​, ಓರ್ವ ಅಮೆರಿಕ, ಕೆನಡಾ, ಸಿಂಗಾಪೂರ್​​ದಿಂದ ಆಗಮಿಸಿದ್ದಾರೆ. ಇವರಿಗೆ ಈಗಾಗಲೇ ತೆಲಂಗಾಣ ಇನ್ಸ್​​​ಟಿಟ್ಯೂಟ್​​ ಆಫ್ ಮೆಡಿಕಲ್​ ಸೈನ್ಸ್​​​ (TIMS) ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿರಿ:ದೆಹಲಿ ಆಸ್ಪತ್ರೆಯಲ್ಲೂ 12 ಶಂಕಿತ Omicron​ ಪ್ರಕರಣ​ ಪತ್ತೆ?

ನಾವು ನಡೆಸಿರುವ ಪರೀಕ್ಷೆ ಪ್ರಕಾರ ಸೋಂಕಿತರಲ್ಲಿ ಒಮಿಕ್ರಾನ್​​ನ ಯಾವುದೇ ಗುಣಲಕ್ಷಣ ಕಾಣಿಸಿಕೊಂಡಿಲ್ಲ. ಇದೀಗ ಜೀನೋಮ್ ಸೀಕ್ವೆನ್ಸಿಂಗ್ ಸ್ಯಾಂಪಲ್ಸ್​ಗೆ ರವಾನೆ ಮಾಡಲಾಗಿದ್ದು, ವರದಿ ಬರುತ್ತಿದ್ದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕಿತ ಮಹಿಳೆ ನಾಪತ್ತೆ

ಕಳೆದ ಎರಡು ದಿನಗಳ ಹಿಂದೆ ವಿದೇಶದಿಂದ ಹೈದರಾಬಾದ್​​ಗೆ ಬಂದಿದ್ದ 36 ವರ್ಷದ ಮಹಿಳೆಯೊಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಐಸೋಲೇಷನ್​​ಗೊಳಪಡಿಸಲು ಮುಂದಾಗಿದ್ದ ವಿಮಾನ ಇಲಾಖೆ ಅಧಿಕಾರಿಗಳ ಕಣ್ಣು ತಪ್ಪಿಸಿ ಕಾಣೆಯಾಗಿದ್ದಳು ಎಂದು ತಿಳಿದು ಬಂದಿದೆ. ಪಾಸ್​ಪೋರ್ಟ್​​ನಲ್ಲಿ ಲಭ್ಯವಾದ ವಿಳಾಸದ ಅನ್ವಯ ಆಕೆಯನ್ನ ಪತ್ತೆ ಮಾಡಲಾಗಿದ್ದು, ಇದೀಗ TIMS ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details