ರಾಜಮಾಲ(ಕೇರಳ): ದೇಶದಲ್ಲೇ ಶೈಕ್ಷಣಿಕ ವ್ಯವಸ್ಥೆಯಲ್ಲಿ ನಂಬರ್ 1 ಸ್ಥಾನ ಪಡೆದಿರುವ ಕೇರಳದಲ್ಲೂ ಆನ್ಲೈನ್ ತರಗತಿಗೆ ತೊಂದರೆಯುಂಟಾಗಿದೆ. ಕೇರಳದ ಮುನ್ನಾರ್ ಪಟ್ಟಣದ ರಾಜಾಮಾಲಾ ಸೇರಿದಂತೆ ಅಕ್ಕಪಕ್ಕದ ಊರಿನ ವಿದ್ಯಾರ್ಥಿಗಳು ಆನ್ಲೈನ್ ತರಗತಿಗೆ ಹಾಜರಾಗಲು 6 ಕಿಮೀ ದೂರ ಪ್ರಯಾಣಿಸಬೇಕಾದ ದುಸ್ಥಿತಿ ಎದುರಿಸುತ್ತಿದ್ದಾರೆ.
ಇಡುಕ್ಕಿಯ ರಾಜಮಾಲ ಪ್ರದೇಶದ 12ನೇ ತರಗತಿ ವಿದ್ಯಾರ್ಥಿಗಳು ಆನ್ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಪ್ರತಿದಿನ 6 ಕಿಮೀ ದೂರದಲ್ಲಿರುವ ಇರವಿಕುಲಮ್ ರಾಷ್ಟ್ರೀಯ ಉದ್ಯಾನವನಕ್ಕೆ ಬರುತ್ತಿದ್ದಾರೆ. ಅಲ್ಲಿಗೆ ಸೇತುವೆ ಬಂಡೆಗಳ ಮೇಲೆ ಕುಳಿತು ಸಂಜೆ ತನಕ ಮೊಬೈಲ್ ಮೂಲಕ ಆನ್ಲೈನ್ ಪಾಠ ಕೇಳುತ್ತಿದ್ದಾರೆ.