ಚೆನ್ನೈ(ತಮಿಳುನಾಡು):'ತಾಯಿಯ ಗರ್ಭ ಮತ್ತು ಸಮಾಧಿ ಇವೆರಡು ಮಾತ್ರ ಮಹಿಳೆಯರಿಗೆ ಸುರಕ್ಷಿತ'ವಾದ ಸ್ಥಳ..! ಇದ್ಯಾವುದೋ ಪುಸ್ತಕದ್ದೋ ಅಥವಾ ಸಿನಿಮಾ ಡೈಲಾಗ್ ಅಲ್ಲ. ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡ 11 ವರ್ಷದ ಬಾಲಕಿಯೊಬ್ಬಳು ಬರೆದಿಟ್ಟ ಡೆತ್ನೋಟ್ನಲ್ಲಿನ ಕರುಳು ಹಿಂಡುವ ಸಾಲುಗಳಿವು.
ಚೆನ್ನೈನ ಪೂನಮಲ್ಲಿ ಬಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಲೈಂಗಿಕ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ತಾಯಿ ಮತ್ತು ತಂದೆ ಕೆಲಸ ನಿಮಿತ್ತ ಹೊರಹೋದ ವೇಳೆ ವಿದ್ಯಾರ್ಥಿ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಷ್ಟು ಸಮಯವಾದರೂ ಬಾಗಿಲು ಮಗಳು ಬಾಗಿಲು ತೆಗೆಯದೇ ಇದ್ದಾಗ ಪೋಷಕರು ಆತಂಕಗೊಂಡು ನೋಡಿದಾಗ ವಿದ್ಯಾರ್ಥಿನಿ ಸಾವನ್ನಪ್ಪಿದ್ದು ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ಸಮಾಜದಲ್ಲಿ ನಾವು ಯಾರನ್ನೂ ನಂಬಲಾಗದು. ಶಿಕ್ಷಕರು, ಸಂಬಂಧಿಕರನ್ನು ಎಂದಿಗೂ ನಂಬಬೇಡಿ. ಹೆಣ್ಣಿಗೆ ತಾಯಿಯ ಗರ್ಭ ಮತ್ತು ಸಮಾಧಿ ಮಾತ್ರ ಸುರಕ್ಷಿತವಾದ ಸ್ಥಳವಾಗಿವೆ.