ಕರ್ನಾಟಕ

karnataka

2 ತಿಂಗಳು ಶ್ರಮಿಸಿ ಅಲೆಕ್ಸಾ ಮಾದರಿಯ ರೋಬೋಟ್​ ಆವಿಷ್ಕರಿಸಿದ ವಿದ್ಯಾರ್ಥಿ

By

Published : Jan 29, 2023, 6:00 PM IST

ತಮಿಳುನಾಡಿನ ವಿದ್ಯಾರ್ಥಿ ಗೂಗಲ್ ಅಸಿಸ್ಟೆಂಟ್ ಅಥವಾ ಅಲೆಕ್ಸಾ ರೀತಿಯಲ್ಲಿ ಸರಳವಾದ ಪ್ರಶ್ನೆಗಳಿಗೆ ಉತ್ತರಿಸುವಂತಹ ರೋಬೋಟ್​​ ಆವಿಷ್ಕರಿಸಿದ್ದಾನೆ.

11th-class-student-invents-robot-like-alexa-in-tamil-nadu
ಅಲೆಕ್ಸಾ ಮಾದರಿಯ ರೋಬೋಟ್​ ಆವಿಷ್ಕರಿಸಿದ 11ನೇ ತರಗತಿಯ ವಿದ್ಯಾರ್ಥಿ

ಪುದುಕೊಟ್ಟೈ (ತಮಿಳುನಾಡು): ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ 11ನೇ ತರಗತಿಯ ವಿದ್ಯಾರ್ಥಿಯೋರ್ವ ವಿಶಿಷ್ಟ ರೀತಿಯ ಚಿಕ್ಕ ರೋಬೋಟ್​ಅನ್ನು ಆವಿಷ್ಕರಿಸಿ ಗಮನ ಸೆಳೆದಿದ್ದಾರೆ. ಮನುಷ್ಯರ ಸರಳವಾದ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಪ್ರತಿಕ್ರಿಯೆ ನೀಡುವುದೇ ಈ ರೋಬೋಟ್​ನ ವಿಶೇಷತೆಯಾಗಿದೆ. ಗೂಗಲ್ ಅಸಿಸ್ಟೆಂಟ್ ಅಪ್ಲಿಕೇಶನ್‌ನೊಂದಿಗೆ ಕಾರ್ಯ ನಿರ್ವಹಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ:ಮಾತನಾಡುವ ರೋಬೋಟ್​ ತಯಾರಕ ಈ 14ರ ಪೋರ ಸಿಡಾನ್​..!

ಇಲ್ಲಿನ ಸೇಂಗಾಯ್ ತೊಪ್ಪುವಿನ ನಿವಾಸಿ ಶ್ರೀಹರನ್ ಎಂಬ ವಿದ್ಯಾರ್ಥಿಯೇ ಈ ಚಿಕ್ಕ ರೋಬೋಟ್​ ತಯಾರಿಸಿ ಸೈ ಎನಿಸಿಕೊಂಡಿದ್ದಾರೆ. ಬಾಲಸುಬ್ರಮಣ್ಯಂ ಮತ್ತು ವಿಜಯಲಕ್ಷ್ಮೀ ದಂಪತಿಯ ಪುತ್ರನಾದ ಈತ ಪುದುಕೊಟ್ಟೈನ ಪೆರಿಯಾರ್ ನಗರದ ಖಾಸಗಿ ಪ್ರೌಢ ಶಾಲೆಯಲ್ಲಿ 11ನೇ ತರಗತಿ ಓದುತ್ತಿದ್ದಾರೆ. ಅಲ್ಲದೇ, ವೈಜ್ಞಾನಿಕ ವಿಷಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಶ್ರೀಹರನ್, ಚಿಕ್ಕಂದಿನಿಂದಲೂ ಹೊಸ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹೊಸ ವಿಷಯಗಳನ್ನು ಅನ್ವೇಷಿಸುವ ಆಸಕ್ತಿ ಹೊಂದಿದ್ದ ಶ್ರೀಹರನ್, 7ನೇ ತರಗತಿಯಲ್ಲಿ ಓದುತ್ತಿರುವಾಗಲೇ ಸಣ್ಣ-ಪುಟ್ಟ ವೈಜ್ಞಾನಿಕ ವಿಷಯಗಳಲ್ಲಿ ಕೆಲಸ ಮಾಡತೊಡಗಿದ್ದರು. ಅದರಲ್ಲೂ, ಕೊರೊನಾ ಮತ್ತು ಲಾಕ್​ಡೌನ್​ ಸಂದರ್ಭದಲ್ಲಿ ಶಾಲಾ ರಜಾ ದಿನಗಳಲ್ಲಿ ವೈಜ್ಞಾನಿಕ ಸಂಶೋಧನೆತಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಲು ಆರಂಭಿಸಿದ್ದರು. ರಜಾ ದಿನಗಳಲ್ಲಿ ಸುಮ್ಮನೆ ಕಾಲಹರಣ ಮಾಡದೇ, ಸಮಯವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ವೈಜ್ಞಾನಿಕ ಸಂಶೋಧನೆಯನ್ನು ವಿಸ್ತರಿಸಲು ಪ್ರಾರಂಭಿಸಿದ್ದರು.

2 ತಿಂಗಳು ಶ್ರಮಿಸಿ ರೋಬೋಟ್ ಅಭಿವೃದ್ಧಿ: ಪ್ರಮುಖವಾಗಿ ವಿದ್ಯಾರ್ಥಿ ಶ್ರೀಹರನ್​ ಕಳೆದ ಎರಡು ತಿಂಗಳು ಕಾಲ ಕಟ್ಟಪಟ್ಟು ಶ್ರಮ ವಹಿಸಿ ಚಿಕ್ಕ ರೋಬೋಟ್​ ಆವಿಷ್ಕರಿಸಿದ್ದಾರೆ. ಸಣ್ಣ ಪ್ರಮಾಣದ ಸ್ವಾಗತ ರೋಬೋಟ್ ಅಭಿವೃದ್ಧಿಪಡಿಸಿರುವ ಅವರು, ಇದು ಸ್ವಯಂಚಾಲಿತ ಮಾಹಿತಿ ಕೇಂದ್ರದ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಈ ರೋಬೋಟ್​ಗೆ ಶ್ರೀಹರನ್ 'ಬಡ್ಡಿ' ಎಂದು ನಾಮಕರಣ ಮಾಡಿದ್ದಾರೆ.

ಈ ರೋಬೋಟ್​​ ಗೂಗಲ್ ಅಸಿಸ್ಟೆಂಟ್ ಅಥವಾ ಅಲೆಕ್ಸಾ ರೀತಿಯಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಆಧುನಿಕ ವಿಜ್ಞಾನದಲ್ಲಿ ಸರಳವಾದ ಪ್ರಶ್ನೆಗಳಿಗೆ ಉತ್ತರಿಸುವ ಈ ರೋಬೋಟ್​ಅನ್ನು ನೋ ಬ್ರೇನರ್ ಎಂದು ಪರಿಗಣಿಸಲ್ಪಟ್ಟರೂ, ಎರಡು ನಗರಗಳ ನಡುವಿನ ರೈಲು ಸಮಯ, ಪ್ರಯಾಣದ ಅಂತರ ಹಾಗೂ ಮಧ್ಯಂತರ ಸಮಯ ಸೇರಿದಂತೆ ಇತರ ಮಾಹಿತಿಯನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ನೀಡುತ್ತದೆ ಎನ್ನುತ್ತಾರೆ ಶ್ರೀಹರನ್.

ಹಿಂದಿ ಮತ್ತು ಇಂಗ್ಲಿಷ್​ ಭಾಷೆಯಲ್ಲಿ ಅಭಿವೃದ್ಧಿ: ಈ ಸ್ವಯಂಚಾಲಿತ ಮಾಹಿತಿ ಕೇಂದ್ರ ಮಾದರಿಯ ರೋಬೋಟ್​ಅನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಸಾಫ್ಟ್‌ವೇರ್‌ನೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ರೋಬೋಟ್​ಅನ್ನು ಆಸ್ಪತ್ರೆಗಳು, ಖಾಸಗಿ ಸಂಸ್ಥೆಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಅನುಕೂಲವಾಗುವಂತೆ ಗೂಗಲ್ ಅಸಿಸ್ಟೆಂಟ್ ಅಪ್ಲಿಕೇಶನ್‌ನೊಂದಿಗೆ ಕೆಲಸ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ವಿದ್ಯಾರ್ಥಿ ಶ್ರೀಹರನ್ ಹೇಳಿದ್ದಾರೆ.

ಅಲ್ಲದೇ, ಸರಳವಾದ ಪ್ರಶ್ನೆಗಳಿಗೆ ಕೈ ಬೀಸುವ ಮೂಲಕ ಉತ್ತರಿಸುವ ಈ ರೋಬೋಟ್‌ನೊಂದಿಗೆ ನಮಗೆ ಮಾತನಾಡುತ್ತಿರುವಂತೆ ಭಾಸವಾಗುವುದಿಲ್ಲ. ಈ ರೋಬೋಟ್​ಅನ್ನು ಕೇವಲ ಎಂಟು ಸಾವಿರ ರೂಪಾಯಿ ಬಂಡವಾಳದಲ್ಲಿ ರೋಬೋಟ್ ತಯಾರಿಸಲಾಗಿದೆ. ಪ್ರಸ್ತುತ ರೋಬೋಟ್‌ನಲ್ಲಿ ಕಣ್ಣುಗಳನ್ನು ಚಲಿಸುವ ಮಾನಿಟರ್ ಮಾದರಿಯಲ್ಲಿ ಮಾತ್ರ ಇದೆ. ಭವಿಷ್ಯದಲ್ಲಿ ಅದನ್ನು ದೃಷ್ಟಿ ಸಾಮರ್ಥ್ಯದ ರೋಬೋಟ್ ಆಗಿ ಅಭಿವೃದ್ಧಿಪಡಿಸಬಹುದು ಹಾಗೂ ಸಾಕಷ್ಟು ತಾಂತ್ರಿಕ ಮತ್ತು ಆರ್ಥಿಕ ಸೌಲಭ್ಯಗಳನ್ನು ಒದಗಿಸಿದರೆ ರೋಬೋಟ್​ಅನ್ನು ತಾಂತ್ರಿಕವಾಗಿಯೂ ಸುಧಾರಿಸಬಹುದು ಎಂದು ತಿಳಿಸಿದ್ದಾರೆ.

ನೆರವು ಸಿಕ್ಕರೆ ಆವಿಷ್ಕಾರಕ್ಕೆ ಆಸರೆ:ಈ ರೋಬೋಟ್​ ಮಾತ್ರವಲ್ಲದೇ, ವಿದ್ಯಾರ್ಥಿ ಶ್ರೀಹರನ್ 3ಡಿ ಪ್ರಿಂಟರ್ ಕೂಡ ಅಭಿವೃದ್ಧಿಪಡಿಸಿದ್ದಾರೆ. ಜೊತೆಗೆ ವಿವಿಧ ವಿಜ್ಞಾನ ಮೇಳಗಳಲ್ಲಿ ಭಾಗವಹಿಸಿರುವ ಶ್ರೀಹರನ್ ವಿವಿಧ ಹೊಸ ಆವಿಷ್ಕಾರಗಳ ಮೂಲಕ ಅತ್ಯುತ್ತಮ ವಿಜ್ಞಾನ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆದರೆ, ಈ ರೀತಿಯ ಹೊಸ ಆವಿಷ್ಕಾರ ರೋಬೋಟ್‌ಗಳನ್ನು ತಯಾರಿಸಲು ಅಗತ್ಯವಾದ ಬಿಡಿಭಾಗಗಳನ್ನು ಪಡೆಯುವುದು ತುಂಬಾ ಕಷ್ಟಕರವಾಗಿದೆ. ಆ ಬಿಡಿಭಾಗಗಳನ್ನು ಖರೀದಿಸಲು ಸರ್ಕಾರವು ನೆರವು ನೋಡಿದರೆ, ಮತ್ತಷ್ಟು ಹೊಸ ಆವಿಷ್ಕಾರಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿ ಶ್ರೀಹರನ್ ಹೇಳುತ್ತಾರೆ.

ಇದನ್ನೂ ಓದಿ:ಬಾಂಬ್ ನಿಷ್ಕ್ರಿಯಗೊಳಿಸುವ ರೋಬೋಟ್ ನಿರ್ಮಿಸಿದ ಡಿಆರ್​​ಡಿಒ: ಭಾರತೀಯ ಸೇನೆಗೆ ಆನೆ ಬಲ

ABOUT THE AUTHOR

...view details