ನವದೆಹಲಿ: ಮಹಾಮಾರಿ ಕೋವಿಡ್ ಕಳೆದ ಹಲವು ತಿಂಗಳುಗಳಿಂದ ಇಡೀ ವಿಶ್ವವನ್ನ ಹಿಂಡಿ ಹಿಪ್ಪೆ ಮಾಡಿದೆ. ಅದೆಷ್ಟೋ ಮಂದಿ ಉದ್ಯೋಗ ಕಳೆದು ಕೊಂಡಿದ್ದಾರೆ. ಕೈಯಲ್ಲಿ ಕೆಲಸವಿಲ್ಲದೆ ಜೀವನೋಪಾಯಕ್ಕೆ ಇನ್ನಿಲ್ಲದಂತೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ವಯಸ್ಕರನ್ನ ಮಾತ್ರ ಇಕ್ಕಟ್ಟಿಗೆ ಸಿಲುಕಿಸದ ಕಣ್ಣಿಗೆ ಕಾಣದ ವೈರಸ್ ಲಕ್ಷಾಂತರ ಮಕ್ಕಳನ್ನು ಅನಾಥರನ್ನಾಗಿಸಿದೆ.
ಕೇವಲ 14 ತಿಂಗಳಲ್ಲಿ ಜಗತ್ತಿನ 21 ದೇಶಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಮಕ್ಕಳು ತಮ್ಮ ಪ್ರಾಥಮಿಕ ಮತ್ತು ದ್ವಿತೀಯ ಆರೈಕೆದಾರರನ್ನು ಕಳೆದುಕೊಂಡಿದ್ದಾರೆ ಎಂದು ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿದೆ. ಭಾರತದ 1,19,000 ಮಕ್ಕಳು ಸಹ ಇದರಲ್ಲಿ ಸೇರಿದ್ದಾರೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡ್ರಗ್ ಅಬ್ಯೂಸ್-ಎನ್‌ಐಡಿಎ ಅಧ್ಯಯನವು, ಭಾರತದಲ್ಲಿ ಕೋವಿಡ್‌ನಿಂದಾಗಿ 25,500 ಮಕ್ಕಳು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. 90,751 ಮಂದಿ ತಮ್ಮ ತಂದೆಯನ್ನು ಕಳೆದುಕೊಂಡರು ಹಾಗೂ ಇನ್ನೂ ಕೆಲವರು ಇಬ್ಬರನ್ನೂ ಕಳೆದುಕೊಂಡಿದ್ದಾರೆ ಎಂದು ಹೇಳಿದೆ.
ಇದೇ ವೈರಸ್‌ನಿಂದಾಗಿ ವಿಶ್ವದಾದ್ಯಂತ 1,134,000 ಮಕ್ಕಳು ಪೋಷಕರು ಅಥವಾ ಪಾಲನೆ ಮಾಡುವ ಅಜ್ಜಿಯನ್ನು ಕಳೆದುಕೊಂಡಿದ್ದಾರೆ ಎಂದು ಅಧ್ಯಯನವು ಅಂದಾಜಿಸಿದೆ. ಈ ಪೈಕಿ 10,42,000 ಮಕ್ಕಳು ತಾಯಿ, ತಂದೆ ಅಥವಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಬಹುತೇಕ ಮಕ್ಕಳು ಒಬ್ಬರನ್ನು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: 3,648 ಬಾಲಕಿಯರು ಸೇರಿ 4,169 ಮಕ್ಕಳು ನಾಪತ್ತೆ: ಲಾಕ್ಡೌನ್ನಲ್ಲಿ ಮಾನವ ಕಳ್ಳಸಾಗಣೆ ವಿಪರೀತ
ಒಟ್ಟಾರೆಯಾಗಿ 15,62,000 ಮಕ್ಕಳು ಕನಿಷ್ಠ ಒಬ್ಬ ಪೋಷಕರು ಅಥವಾ ಪಾಲನೆ ಇಲ್ಲವೇ ಇತರೆ ಅಜ್ಜ (ಅಥವಾ ಇತರ ಹಳೆಯ ಸಂಬಂಧಿ) ಸಾವನ್ನಪ್ಪಿದ್ದಾರೆಂದು ಅಂದಾಜಿಸಲಾಗಿದೆ ಎಂದು ಎನ್ಐಎಚ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಾಥಮಿಕ ಆರೈಕೆದಾರರನ್ನು (ಪೋಷಕರು ಅಥವಾ ಪಾಲನೆ ಅಜ್ಜಿಯರು) ಕಳೆದುಕೊಂಡಿರುವ ಮಕ್ಕಳನ್ನು ಹೊಂದಿರುವ ದೇಶಗಳಲ್ಲಿ ದಕ್ಷಿಣ ಆಫ್ರಿಕಾ, ಪೆರು, ಅಮೆರಿಕ, ಭಾರತ, ಬ್ರೆಜಿಲ್ ಮತ್ತು ಮೆಕ್ಸಿಕೊ ಸೇರಿವೆ.
ಪ್ರಾಥಮಿಕ ಆರೈಕೆದಾರರಲ್ಲಿ (1/1000 ಮಕ್ಕಳು) ಕೋವಿಡ್-ಸಂಬಂಧಿತ ಸಾವಿನ ಪ್ರಮಾಣವನ್ನು ಹೊಂದಿರುವ ದೇಶಗಳಲ್ಲಿ ಪೆರು, ದಕ್ಷಿಣ ಆಫ್ರಿಕಾ, ಮೆಕ್ಸಿಕೊ, ಬ್ರೆಜಿಲ್, ಕೊಲಂಬಿಯಾ, ಇರಾನ್, ಯುನೈಟೆಡ್ ಸ್ಟೇಟ್ಸ್, ಅರ್ಜೆಂಟೀನಾ ಮತ್ತು ರಷ್ಯಾ ಸೇರಿವೆ.
ಪೋಷಕರು ಅಥವಾ ಪಾಲನೆದಾರರ ನಷ್ಟದ ನಂತರ ಮಗು ಅನುಭವಿಸುವ ಆಘಾತವು ವಿನಾಶಕಾರಿಯಾದರೂ, ಮಾದಕವಸ್ತು ಬಳಕೆಯಂತಹ ಮತ್ತಷ್ಟು ವ್ಯತಿರಿಕ್ತ ಪರಿಣಾಮಗಳನ್ನು ತಡೆಯುವ ಪುರಾವೆ ಆಧಾರಿತ ಮಧ್ಯಸ್ಥಿಕೆಗಳಿವೆ. ಮಕ್ಕಳಿಗೆ ಈ ಮಧ್ಯಸ್ಥಿಕೆಗಳಲ್ಲಿ ಪ್ರವೇಶವಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು ಎನ್ಐಡಿಎ ನಿರ್ದೇಶಕಿ ನೋರಾ ಡಿ ವೋಲ್ಕೊವ್ ಹೇಳಿದ್ದಾರೆ.
ವರದಿಯ ಪ್ರಕಾರ, 2,898 ಭಾರತೀಯ ಮಕ್ಕಳು ತಮ್ಮ ಪಾಲನೆಯ ಅಜ್ಜಿಯರನ್ನು ಕಳೆದುಕೊಂಡಿದ್ದಾರೆ. ಆದರೂ ಭಾರತದಲ್ಲಿ 1,000 ಮಕ್ಕಳಿಗೆ ಪ್ರಾಥಮಿಕ ಮತ್ತು ಪಾಲನೆ ಪೋಷಕರ ನಷ್ಟದ ದರ 0.5ರಷ್ಟಿದೆ. ದಕ್ಷಿಣ ಆಫ್ರಿಕಾ (6.4), ಪೆರು (14.1), ಬ್ರೆಜಿಲ್ (3.5), ಕೊಲಂಬಿಯಾ (3.4), ಮೆಕ್ಸಿಕೊ (5.1), ರಷ್ಯಾ (2.0), ಮತ್ತು ಯುಎಸ್ (1.8) ರಷ್ಟಿದೆ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.