ನವದೆಹಲಿ:ಜಮ್ಮು- ಕಾಶ್ಮೀರದಲ್ಲಿ ಇನ್ನಿಲ್ಲದ ಉಪಟಳ ನೀಡುತ್ತಿದ್ದ ಉಗ್ರರ ದಮನ ಕಾರ್ಯಾಚರಣೆ ಈ ವರ್ಷ ಭರ್ಜರಿಯಾಗಿಯೇ ನಡೆದಿದೆ. ಕಾಶ್ಮೀರದಲ್ಲಿ ಇದುವರೆಗೆ 32 ವಿದೇಶಿಯರು ಸೇರಿದಂತೆ 118 ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಮಂಗಳವಾರ ಹೇಳಿದ್ದಾರೆ.
ಕಾಶ್ಮೀರದಲ್ಲಿ ಹತರಾದ 118 ಉಗ್ರರ ಪೈಕಿ 77 ಮಂದಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ್ದರೆ, 26 ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದವರಾಗಿದ್ದಾರೆ. ಉಳಿದ 15 ಮಂದಿ ಇತರ ಉಗ್ರಗಾಮಿ ಗುಂಪುಗಳಿಗೆ ಸೇರಿದವರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.