ಸೂರತ್: ಅಯೋಧ್ಯೆಯಲ್ಲಿ ಭವ್ಯವಾದ ರಾಮ ದೇವಾಲಯ ನಿರ್ಮಿಸಲು ರಾಮ ಮಂದಿರ ಅಯೋಧ್ಯೆ ಸಮರ್ಪಣ ನಿಧಿ ಅಡಿಯಲ್ಲಿ ಜನರಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ಈ ಹಿನ್ನೆಲೆ ಸೂರತ್‌ನ 11 ವರ್ಷದ ಬಾಲಕಿ ಭಾವಿಕಾ, ಸೂರತ್‌ನಲ್ಲಿ 4 ರಾಮ ಕಥೆಗಳ ಕೀರ್ತನೆ ಆಯೋಜನೆ ಮಾಡಿ ಈ ಮೂಲಕ 50 ಲಕ್ಷ ರೂ. ಸಂಗ್ರಹಿಸಿ ಆ ಮೊತ್ತವನ್ನು ದೇಣಿಗೆ ನೀಡಿದ್ದಾಳೆ.
ಸೂರತ್‌ನ ಈ 11 ವರ್ಷದ ಪುಟ್ಟ ಹುಡುಗಿ ರಾಮ ಭಕ್ತಿಯನ್ನು ಈ ಮುಖಾಂತರ ತೋರಿಸಿದ್ದಾಳೆ. ಈ ಬಾಲಕಿ ಲಾಕ್ ಡೌನ್ ಸಮಯದಲ್ಲಿ ಭಗವದ್ಗೀತೆಯನ್ನು ಶಾಲಾ ಶಿಕ್ಷಣದೊಂದಿಗೆ ಅಧ್ಯಯನ ಮಾಡಲು ಪ್ರಾರಂಭಿಸಿದಳು, ನಂತರ ರಾಮಾಯಣವನ್ನು ಪಠಿಸುವಾಗ ಭಗವಾನ್ ರಾಮನ ಅಸ್ತಿತ್ವ ಮತ್ತು ಅವನ ಶ್ರೇಷ್ಠತೆಯ ಬಗ್ಗೆ ಅವಳು ತಿಳಿದುಕೊಂಡಳು. ನಂತರ ರಾಮಮಂದಿರ ನಿರ್ಮಾಣ ಹಾಗೂ ದೇಣಿಗೆ ಬಗ್ಗೆ ಆಲೋಚನೆ ಮಾಡಿದ ಈಕೆ ರಾಮಕಥೆಗಳನ್ನು ಮಾಡಲು ನಿರ್ಧರಿಸಿದಳು