ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರದಲ್ಲಿ 11 ಪ್ರವಾಸಿಗರು, ಇಬ್ಬರು ಮಾರ್ಗದರ್ಶಿಗಳು ನಾಪತ್ತೆ - ಪಹಲ್ಗಾಮ್​ನಲ್ಲಿ ಪ್ರವಾಸಿಗರ ನಾಪತ್ತೆ

ಜಮ್ಮು ಕಾಶ್ಮೀರದಲ್ಲಿ ಭೀಕರ ಮಳೆಯಾಗುತ್ತಿದ್ದು, ಭೂಕುಸಿತಗಳು ಉಂಟಾಗುತ್ತಿವೆ. ಈ ಮಧ್ಯೆಯೇ ತಾರ್ಸರ್ ಮಾರ್ಸರ್ ಪ್ರದೇಶಕ್ಕೆ ಚಾರಣ ಹೋಗಿದ್ದ 14 ಪ್ರವಾಸಿಗರ ತಂಡ ನಾಪತ್ತೆಯಾದ ಬಗ್ಗೆ ವರದಿ ಬಂದಿದೆ.

ಜಮ್ಮು ಕಾಶ್ಮೀರದಲ್ಲಿ 11 ಪ್ರವಾಸಿಗರು, ಇಬ್ಬರು ಮಾರ್ಗದರ್ಶಿಗಳು ನಾಪತ್ತೆ
ಜಮ್ಮು ಕಾಶ್ಮೀರದಲ್ಲಿ 11 ಪ್ರವಾಸಿಗರು, ಇಬ್ಬರು ಮಾರ್ಗದರ್ಶಿಗಳು ನಾಪತ್ತೆ

By

Published : Jun 22, 2022, 7:05 PM IST

ಜಮ್ಮು- ಕಾಶ್ಮೀರ:ಜಮ್ಮು ಕಾಶ್ಮೀರದ ಕಡಿದಾದ ಪ್ರದೇಶವಾದ ತಾರ್ಸರ್ ಮಾರ್ಸರ್ ಸರೋವರ ವೀಕ್ಷಣೆಗೆ ತೆರಳಿದ್ದ 14 ಜನರ ಪ್ರವಾಸಿಗರ ತಂಡವೊಂದು ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ಇದರಲ್ಲಿ ಓರ್ವ ಪ್ರವಾಸಿ ಮಾರ್ಗದರ್ಶಿ ನೀರಿನಲ್ಲಿ ಕೊಚ್ಚಿ ಹೋದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಡಳಿತ ತಕ್ಷಣವೇ ರಕ್ಷಣಾ ತಂಡವನ್ನು ಸ್ಥಳಕ್ಕೆ ರವಾನಿಸಿ ಕಾರ್ಯಾಚರಣೆ ಆರಂಭಿಸಿದೆ. ತಾರ್ಸಾರ್ ಮತ್ತು ಮಾರ್ಸರ್ ಎರಡು ಸರೋವರಗಳಾಗಿವೆ. ಚಾರಣದ ಮೂಲಕ ಮಾತ್ರವೇ ಈ ಪ್ರದೇಶ ತಲುಪಬಹುದಾಗಿದೆ.

ಟ್ರಾಲ್, ಪಹಲ್ಗಾಮ್ ಮತ್ತು ಶ್ರೀನಗರದ ನಡುವಿನ ದಕ್ಷಿಣ ಕಾಶ್ಮೀರ ಪ್ರದೇಶದ ಕಡಿದಾದ ಪ್ರದೇಶದಲ್ಲಿದೆ. ಅಲ್ಲದೇ, ಈ ಪ್ರದೇಶವು ಪವಿತ್ರ ಅಮರನಾಥ ಗುಹೆ ಇರುವ ಸನ್ಮೆ ಮಾರ್ಗದಲ್ಲಿ ಬರುತ್ತದೆ.

ಇದನ್ನೂ ಓದಿ:ಜಮ್ಮು-ಕಾಶ್ಮೀರದಲ್ಲಿ ಭೀಕರ ಮಳೆ: ಭಾರಿ ಭೂಕುಸಿತದಿಂದ ಕಂಗಾಲಾದ ಕಣಿವೆ ಜನ

ABOUT THE AUTHOR

...view details