ಕರ್ನಾಟಕ

karnataka

ETV Bharat / bharat

ಬಾವಿಯಲ್ಲಿ ಬಿದ್ದ ಬಾಲಕಿ: ರಕ್ಷಣೆಗೆ ಮುಂದಾಗಿ ಪ್ರಾಣ ಕಳೆದುಕೊಂಡ್ರು 11 ಮಂದಿ - ಬಾವಿಯಲ್ಲಿ ಬಿದ್ದ ಬಾಲಕಿ

50 ಅಡಿ ಆಳದ ಬಾವಿಯಲ್ಲಿ ಬಿದ್ದ ಬಾಲಕಿ ರಕ್ಷಣೆ ಮಾಡಲು ಹೋಗಿ ಅದರೊಳಗೆ ಬಿದ್ದಿದ್ದ 40 ಜನರ ಪೈಕಿ 11 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Madhya pradesh well tragedy
Madhya pradesh well tragedy

By

Published : Jul 17, 2021, 5:04 AM IST

Updated : Jul 17, 2021, 6:23 AM IST

ವಿದಿಶಾ(ಮಧ್ಯಪ್ರದೇಶ): ಬಾವಿಯಲ್ಲಿ ಬಿದ್ದ ಬಾಲಕಿ ರಕ್ಷಿಸಲು ಮುಂದಾದ ಸಂದರ್ಭದಲ್ಲಿ ಅದರ ಗೋಡೆ ಕುಸಿದು ಸುಮಾರು 40 ಜನರು ಅದರೊಳಗೆ ಬಿದ್ದಿರುವ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿತ್ತು. ಈ ಪೈಕಿ 11 ಜನರು ಮೃತಪಟ್ಟಿದ್ದು, ಉಳಿದವರನ್ನು ರಕ್ಷಿಸುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ವಿದಿಶಾದ ಗಂಜ್​ ಬಸೋದಾ ಎಂಬ ಪ್ರದೇಶದಲ್ಲಿ ಮೊನ್ನೆ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ. ಬಾವಿಯಲ್ಲಿ ಬಾಲಕಿ ಬಿದ್ದಿರುವ ವಿಷಯ ಗೊತ್ತಾಗುತ್ತಿದ್ದಂತೆ ಗ್ರಾಮದ ಜನರು ಅಲ್ಲಿಗೆ ತೆರಳಿದ್ದರು. ಈ ವೇಳೆ ಬಾವಿಯ ಗೋಡೆ ಏಕಾಏಕಿ ಕುಸಿದಿರುವ ಕಾರಣ ಅನೇಕರು ಬಾವಿಯೊಳಗೆ ಬಿದ್ದಿದ್ದರು. ಆರಂಭದಲ್ಲಿ ಟ್ರ್ಯಾಕ್ಟರ್ ಸಹಾಯದಿಂದ ಅವರನ್ನ ಹೊರ ತೆಗೆಯಲು ಮುಂದಾದಾಗ ಅದು ಕೂಡ ಬಾವಿಯೊಳಗೆ ಬಿದ್ದಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎನ್​ಡಿಆರ್​ಎಫ್​ ಮತ್ತು ಎಸ್​​ಡಿಆರ್​ಎಫ್​ ತಂಡಗಳು ಸುಮಾರು 30 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಬಾವಿಯೊಳಗೆ 20 ಅಡಿ ನೀರು ತುಂಬಿದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಕೆಲ ಹೊತ್ತು ಅಡ್ಡಿಯಾಗಿತ್ತು.

ಇದನ್ನೂ ಓದಿರಿ: ಬಾವಿಯಲ್ಲಿ ಬಿದ್ದ ಮಗುವಿನ ರಕ್ಷಣೆ ವೇಳೆ ಗೋಡೆ ಕುಸಿದು ಅದರೊಳಗೆ ಬಿದ್ದ 40 ಜನ; ಇಬ್ಬರು ಸಾವು

ರಕ್ಷಣೆ ಮಾಡಿರುವ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​, ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದಾರೆ. ಜತೆಗೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಹಾಗೂ ಪರಿಹಾರ ವೆಚ್ಚ ನೀಡುವುದಾಗಿ ಹೇಳಿದ್ದಾರೆ.

ಘಟನೆಗೆ ಮೋದಿ ಕಳವಳ, 2 ಲಕ್ಷ ರೂ. ಪರಿಹಾರ ಘೋಷಣೆ

ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿರುವ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Last Updated : Jul 17, 2021, 6:23 AM IST

ABOUT THE AUTHOR

...view details