ಝಾನ್ಸಿ (ಉತ್ತರಪ್ರದೇಶ) :ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ನಾಲ್ವರು ಮಕ್ಕಳು, 7 ಮಹಿಳೆಯರು ಸೇರಿ 11 ಜನರು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯ ಚಿರಗಾಂವ್ ಪ್ರದೇಶದಲ್ಲಿ ನಡೆದಿದೆ.
ಇವೆರಲ್ಲರೂ ವಿಜಯದಶಮಿ ಪ್ರಯುಕ್ತ ದೇವಿಯ ದರ್ಶನಕ್ಕೆಂದು ತೆರಳಿ ಹಿಂದಿರುಗುವ ವೇಳೆ ದಾರಿಯಲ್ಲಿ ಜಾನುವಾರು ಅಡ್ಡ ಬಂದಿತ್ತು. ಅದನ್ನು ರಕ್ಷಿಸಲು ಹೋಗಿ ಟ್ರ್ಯಾಕ್ಟರ್ ಟ್ರಾಲಿ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇನ್ನೂ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಝಾನ್ಸಿ ವೈದ್ಯಕೀಯ ಕಾಲೇಜು-ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.