ಡೆಹ್ರಾಡೂನ್(ಉತ್ತರಾಖಂಡ): ಆಳವಾದ ಕಂದಕಕ್ಕೆ ಬಸ್ ಉರುಳಿ ಸುಮಾರು 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ವಿಕಾಸನಗರ ಎಂಬಲ್ಲಿ ನಡೆದಿದೆ. ಈ ಕುರಿತು ಈಟಿವಿಯೊಂದಿಗೆ ಮಾತನಾಡಿದ ವಿಕಾಸನಗರ ಎಸ್ಒ ಪ್ರದೀಪ್ ಬಿಷ್ತ್ ಅವರು ತುನಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ವಿಕಾಸನಗರದಿಂದ ಸುಮಾರು 55 ಕಿಲೋಮೀಟರ್ ದೂರದಲ್ಲಿ ದುರ್ಘಟನೆ ಜರುಗಿದೆ ಎಂದಿ ದ್ದಾರೆ.
ಉತ್ತರಾಖಂಡದಲ್ಲಿ ಆಳ ಕಂದಕಕ್ಕೆ ಬಸ್ ಉರುಳಿ 11 ಮಂದಿ ದುರ್ಮರಣ - uttarakhand bus accident
ಉತ್ತರಾಖಂಡದ ವಿಕಾಸನಗರ ಎಂಬಲ್ಲಿ ಬಸ್ ಕಂದಕಕ್ಕೆ ಉರುಳಿ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಳವಾದ ಕಂದಕಕ್ಕೆ ಬಸ್ ಉರುಳಿ 11 ಮಂದಿ ದುರ್ಮರಣ, ನಾಲ್ವರಿಗೆ ಗಾಯ
ಮಾಹಿತಿ ಪ್ರಕಾರ, ವಾಹನದಲ್ಲಿ ಸುಮಾರು 15 ಜನರಿದ್ದು, ಈ ಪೈಕಿ 11 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡವು ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಮುಂದಿನ ವರ್ಷ 5 ಬಿಲಿಯನ್ ಕೋವಿಡ್ ವ್ಯಾಕ್ಸಿನ್ ಉತ್ಪಾದನೆಗೆ ಭಾರತ ಸಿದ್ಧ: ಮೋದಿ