ಕರ್ನಾಟಕ

karnataka

ETV Bharat / bharat

ಭಯೋತ್ಪಾದಕ ಸಂಘಟನೆ ಆಲ್‌​ ಖೈದಾ ಜೊತೆ ನಂಟು: ಅಸ್ಸಾಂನಲ್ಲಿ 11 ಮಂದಿ ಬಂಧನ - ಭಾರತೀಯ ಉಪಖಂಡದ ಆಲ್​ ಖೈದಾ

ಅಸ್ಸಾಂನ ಮೊರಿಗಾಂವ್, ಬಾರ್ಪೇಟಾ, ಗುವಾಹಟಿ ಮತ್ತು ಗೋಲ್ಪಾರಾ ಜಿಲ್ಲೆಗಳಿಂದ ಆಲ್​ ಖೈದಾ ಮತ್ತು ಅನ್ಸರುಲ್ಲಾ ಬಾಂಗ್ಲಾ ತಂಡ (ಎಬಿಟಿ) ದೊಂದಿಗೆ ಸಂಬಂಧ ಹೊಂದಿರುವವರನ್ನು ಬಂಧಿಸಿದ್ದು, ಬಂಧಿತರಿಂದ ಹಲವು ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಆಕ್ಷೇಪಾರ್ಹ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

11 people arrested in connection with the Al-Qaeda, ATB
ಭಯೋತ್ಪಾದಕ ಘಟಕ ಆಲ್​ ಖೈದಾ, ಎಟಿಬಿ ಜೊತೆ ನಂಟು ಹಿನ್ನೆಲೆ 11 ಮಂದಿ ಬಂಧನ

By

Published : Jul 29, 2022, 10:36 AM IST

ಗುವಾಹಟಿ (ಅಸ್ಸಾಂ):ಭಯೋತ್ಪಾದಕ ಸಂಘಟನೆಗಳಾದ ಆಲ್​ ಖೈದಾ ಹಾಗೂ ಬಾಂಗ್ಲಾದೇಶ ಮೂಲದ ಅನ್ಸರುಲ್ಲಾ ಬಾಂಗ್ಲಾ ತಂಡ (ಎಬಿಟಿ) ಸೇರಿದಂತೆ ಜಾಗತಿಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಮದರಸಾ ಶಿಕ್ಷಕನಾಗಿದ್ದಾನೆ.

ಕಾಜಿಬುರ್ ಹುಸೇನ್ (37), ಮುಜಿಬೌರ್ ರೆಹಮಾನ್ (50)

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಕುರಿತು ಪ್ರತಿಕ್ರಿಯಿಸಿ, "ನಾವು ಅಸ್ಸಾಂನ ಬಾರ್ಪೇಟಾ ಮತ್ತು ಮೊರಿಗಾಂವ್ ಜಿಲ್ಲೆಗಳಲ್ಲಿ ಜಿಹಾದಿ ಸಂಚುಕೋರರನ್ನು ಬಂಧಿಸಿದ್ದೇವೆ. ರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದ ಇನ್ನೂ ಹೆಚ್ಚಿನ ಮಾಹಿತಿ ಪಡೆಯುತ್ತೇವೆ" ಎಂದು ಹೇಳಿದ್ದಾರೆ.

ದಿವಾನ್ ಹಮೀದುಲ್ ಇಸ್ಲಾಂ (20), ಮೊಯಿನುಲ್ ಹಕ್ (42)

ಪ್ರಕರಣದ ಆರೋಪಿಯಾಗಿರುವ ಮುಸ್ತಫಾ ಅಲಿಯಾಸ್ ಮುಫ್ತಿ ಮುಸ್ತಫಾ ಮೋರಿಗಾಂವ್ ಜಿಲ್ಲೆಯ ಸಹರಿಯಾ ಗಾಂವ್ ನಿವಾಸಿಯಾಗಿದ್ದು, ಭಾರತದ ಉಪಖಂಡದಲ್ಲಿ ಸಕ್ರಿಯವಾಗಿರುವ ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿರುವ ಅನ್ಸರುಲ್ಲಾ ಬಾಂಗ್ಲಾ ತಂಡದ (ಎಬಿಟಿ) ಸಕ್ರಿಯ ಸದಸ್ಯ. ಆತ ಭಾರತದಲ್ಲಿ ಎಬಿಟಿ ಮಾಡ್ಯೂಲ್​ನ ಪ್ರಮುಖ ಹಣಕಾಸು ವ್ಯವಹಾರದ ಮಾರ್ಗವಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜುಬೈರ್ ಖಾನ್ (25), ರಫೀಕುಲ್ ಇಸ್ಲಾಂ (27)

ಸಹರಿಯಾ ಗಾಂವ್ ಗ್ರಾಮದಲ್ಲಿ ಮುಸ್ತಫಾ ಮದರಸಾ (ಜಮೀವುಲ್ ಹುದಾ ಮದ್ರಸಾ) ನಡೆಸುತ್ತಿದ್ದು, ಅದರಲ್ಲಿ ಈ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೆ ಆಶ್ರಯ ನೀಡಲಾಗಿದೆ ಎಂಬ ಅನುಮಾನದ ಮೇಲೆ ಪೊಲೀಸರು ಮದರಸಾ ಕಟ್ಟಡವನ್ನು ಸೀಲ್ ಮಾಡಿದ್ದಾರೆ. ಬಂಧಿತ ವ್ಯಕ್ತಿಗಳಿಗೆ ಅದು ಸುರಕ್ಷಿತ ಮನೆಯಾಗಿತ್ತು. ಮತ್ತು ಮದರಸಾದ ಚಟುವಟಿಕೆಗಳಿಗೆ ಕಾನೂನುಬಾಹಿರ ಚಟುವಟಿಕೆಗಳ ಆದಾಯದ ಮೂಲಕ ಬಂದ ಹಣವನ್ನು ನೀಡಲಾಗುತ್ತಿತ್ತು ಎಂದು ಶಂಕಿಸಲಾಗಿದೆ.

ಶಹನೂರ್ ಅಸ್ಲಾಂ ಮತ್ತು ಸಹಜಹಾನ್ ಅಲಿ (34)

ಬಂಧಿತ ವ್ಯಕ್ತಿಗಳಿಂದ ಹಲವಾರು ಎಲೆಕ್ಟ್ರಾನಿಕ್ ಸಾಧನಗಳು ಮತ್ತು ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೋಗಿಘೋಪಾ ಪಿಎಸ್ ಪ್ರಕರಣದಲ್ಲಿ ಬೇಕಾಗಿರುವ ಮೆಹಬೂಬುರ್ ರೆಹಮಾನ್ ಅಲಿಯಾಸ್ ಮೆಹಬೂಬ್ ಕೂಡ ಅನ್ಸಾರುಲ್ಲಾ ಬಾಂಗ್ಲಾ ತಂಡದ ಸದಸ್ಯನಾಗಿದ್ದು, ಆತನನ್ನು ಜುಲೈ 26 ರಂದು ಬೊಂಗೈಗಾಂವ್ ಪೊಲೀಸ್ ತಂಡ ಬಂಧಿಸಿತ್ತು.

ಮುಸ್ತಫಾ ಅಲ್ಲದೆ ಮೋರಿಗಾಂವ್‌ನ ಅಫ್ಸರುದ್ದೀನ್ ಭುಯಾನ್ (39), ತಲೆಮರೆಸಿಕೊಂಡಿರುವ ಸದಸ್ಯರಲ್ಲಿ ಒಬ್ಬರಾದ ಮೆಹಬೂಬುರ್ ರೆಹಮಾನ್‌ಗೆ ಲಾಜಿಸ್ಟಿಕ್ಸ್ ಮತ್ತು ಆಶ್ರಯ ಒದಗಿಸಿದ್ದ ಗೋಲ್ಪಾರಾ ಮೂಲದ ಅಬ್ಬಾಸ್ ಅಲಿ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಜುಬೈರ್ ಖಾನ್ (25), ರಫೀಕುಲ್ ಇಸ್ಲಾಂ (27), ದಿವಾನ್ ಹಮೀದುಲ್ ಇಸ್ಲಾಂ (20), ಮೊಯಿನುಲ್ ಹಕ್ (42), ಕಾಜಿಬುರ್ ಹುಸೇನ್ (37), ಮುಜಿಬೌರ್ ರೆಹಮಾನ್ (50), ಶಹನೂರ್ ಅಸ್ಲಾಂ ಮತ್ತು ಸಹಜಹಾನ್ ಅಲಿ (34) ಎಂಟು ಜನರನ್ನು AQIS ಮತ್ತು ABT ನೊಂದಿಗೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಬಾರ್ಪೇಟಾ ಪೊಲೀಸರು ಬಂಧಿಸಿದ್ದಾರೆ.

ಸಂಪರ್ಕಗಳು ಮತ್ತು ಜಾಲವನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ಮತ್ತು ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಇದು ಅಸ್ಸಾಂ ಪೊಲೀಸರು ಮತ್ತು ಕೇಂದ್ರ ಏಜೆನ್ಸಿಗಳ ಸುದೀರ್ಘ ಕಣ್ಗಾವಲು ಕಾರ್ಯಾಚರಣೆಯ ಫಲಿತಾಂಶ ಎಂದು ವಿಶೇಷ ಡಿಜಿಪಿ ಜಿ.ಪಿ.ಸಿಂಗ್ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ :ಭಯೋತ್ಪಾದನಗೆ ಸಂಚು ರೂಪಿಸುತ್ತಿರುವ ABT, AQIS.. ಅಸ್ಸೋಂನ 11 ಕಡೆಗಳಲ್ಲಿ ಎನ್​ಐಎ ಶೋಧ

ABOUT THE AUTHOR

...view details